Friday, August 19, 2022

Latest Posts

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಸೆಪ್ಟಂಬರ್ 7 ರಿಂದ 18 ರವರೆಗೆ ಎಕ್ಸಾಮ್ !

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದೆ.
ಸೆಪ್ಟಂಬರ್ 7 ರಿಂದ 18 ರವರೆಗೆ ದಿನ ಬೆಳಗ್ಗೆ 10.15 ರಿಂದ 1.30, ಮಧ್ಯಾಹ್ನ 2.15 ರಿಂದ 5.30 ರ ವರೆಗೆ ಪರೀಕ್ಷೆ ನಡೆಯಲಿದೆ.
ಸೆ.7 ರಂದು ಬೆಳಿಗ್ಗೆ: ಉರ್ದು, ಸಂಸ್ಕೃತ, ಮಧ್ಯಾಹ್ನ: ಮಾಹಿತಿ ತಂತ್ರಜ್ಞಾನ, ರೀಟೈಲ್ ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್ ಹಾಗೂ ಗೃಹವಿಜ್ಞಾನ, ಸೆ. 8 ರಂದು ಬೆಳಗ್ಗೆ:ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಸೆ.9 ರಂದು ಬೆಳಗ್ಗೆ: ಹಿಂದಿ,ಮಧ್ಯಾಹ್ನ: ತಮಿಳು, ತೆಲುಗು , ಮಲಯಾಳಂ , ಮರಾಠಿ , ಅರೇಬಿಕ್ , ಫ್ರೆಂಚ್ ,ಸೆ. 10 ರಂದು ಬೆಳಗ್ಗೆ: ಇಂಗ್ಲಿಷ್, ಸೆ. 11 ರಂದು ಬೆಳಗ್ಗೆ: ಐಚ್ಛಿಕ ಕನ್ನಡ , ಎಲೆಕ್ಟ್ರಾನಿಕ್ಸ್ , ಗಣಕವಿಜ್ಞಾನ ,ಮಧ್ಯಾಹ್ನ: ಕರ್ನಾಟಕ ಸಂಗೀತ , ಹಿಂದುಸ್ತಾನಿ ಸಂಗೀತ , ಭೂಗರ್ಭಶಾಸ್ತ್ರ,  ಸೆ. 12 ರಂದು ಬೆಳಗ್ಗೆ: ಅರ್ಥಶಾಸ್ತ್ರ , ಭೌತಶಾಸ್ತ್ರ, ಸೆ. 13 ರಂದು ಭಾನುವಾರ ರಜಾದಿನ, ಸೆ.14 ರಂದು ಬೆಳಗ್ಗೆ: ತರ್ಕಶಾಸ್ತ್ರ , ವ್ಯವಹಾರ ಅಧ್ಯಯನ , ರಸಾಯನಶಾಸ್ತ್ರ , ಶಿಕ್ಷಣ, ಸೆ.15 ರಂದು ಬೆಳಗ್ಗೆ: ಕನ್ನಡ, ಸೆ.16 ರಂದು ಬೆಳಗ್ಗೆ: ರಾಜ್ಯಶಾಸ್ತ್ರ , ಬೇಸಿಕ್ ಮ್ಯಾಥ್ಸ್, ಸೆ. 17 ರಂದು ಬೆಳಗ್ಗೆ: ಸಮಾಜಶಾಸ್ತ್ರ , ಲೆಕ್ಕಶಾ ಸ್ತ್ರ , ಗಣಿತ, ಸೆ. 18 ರಂದು ಬೆಳಗ್ಗೆ: ಭೂಗೋಳಶಾಸ್ತ್ರ ,ಮಧ್ಯಾಹ್ನ: ಮನಃಶಾಸ್ತ್ರ.
ಪಿಯುಸಿಯಲ್ಲಿ ಅನುತ್ತೀರ್ಣರಾದ ಉತ್ತೀರ್ಣರಾದ ವಿದ್ಯಾರ್ಥಿಗಳು , ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಬಹುದಾಗಿದೆ , ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಪ್ರಾಂಶುಪಾಲರಿಗೆ ಇಲಾಖೆ ಸೂಚನೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!