ಬೆಳಗಾವಿ: ಮಂಗಳವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ 27 ನೇ ಸ್ಥಾನ ಪಡೆದರೆ,ಚಿಕ್ಕೋಡಿ ಶೈಕ್ಷಣಿಕ 20 ನೇ ಸ್ಥಾನ ಪಡೆದುಕೊಂಡಿವೆ.
ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಚಿಕ್ಕೋಡಿ ಕಳೆದ ವರ್ಷ 25 ನೇ ಸ್ಥಾನ ಪಡೆದಿತ್ತು.ಪ್ರಸಕ್ತ ವರ್ಷ 20 ನೇ ಸ್ಥಾನ ಪಡೆದಿದೆ. ಬೆಳಗಾವಿಗೆ ಒಂದೇ ಸ್ಥಾನ ಬಡ್ತಿ ಪಡೆದು 28 ನೇ ಸ್ಥಾನದಿಂದ 27 ನೇ ಸ್ಥಾನ ಪಡೆದಿದೆ.
ಕಳೆದ ನಡೆದ ವರ್ಷ ದ್ವೀತಿಯ ಪಿಯು ಪರೀಕ್ಷೆಯಲ್ಲಿ ಶೇ.56.18 ಫಲಿತಾಂಶದೊಂದಿಗೆ 28ನೇ ಸ್ಥಾನ ಪಡೆದಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಈ ಬಾರಿ ಶೇ.59.7 ಫಲಿತಾಂಶದೊಂದಿಗೆ 27ನೇ ಸ್ಥಾನಕ್ಕೇರಿದೆ.
ಕಳೆದ ಸಲ ಶೇ.60.81 ಫಲಿತಾಂಶದೊಂದಿಗೆ 25ನೇ ರ್ಯಾಂಕ್ ಗಳಿಸಿದ್ದ ಚಿಕ್ಕೋಡಿ, ಈ ಬಾರಿ ಶೇ.63.88 ಫಲಿತಾಂಶದೊಂದಿಗೆ 20ನೇ ಸ್ಥಾನ ಪಡೆದಿದೆ.