Thursday, July 7, 2022

Latest Posts

ದ್ವಿತೀಯ ಪಿಯು ಫಲಿತಾಂಶ: ಈ ಬಾರಿ ಶೇ. 61.80 ಫಲಿತಾಂಶ, ವಿದ್ಯಾರ್ಥಿನಿಯರದ್ದೇ ಮೇಲುಗೈ

ಬೆಂಗಳೂರು : ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಸುಮಾರು 6 ಲಕ್ಷದ 75 ಸಾವಿರದ 277 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. ಈ ಬಾರಿ ಶೇ. 61.80 ಫಲಿತಾಂಶ ಬಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪೃಥ್ವಿ-592 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ರಘುವೀರ್ -592 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ವೇಳೆ, ಕಲಾ ವಿಭಾಗದಲ್ಲಿ ಕಾಮೇಗೌಡ -594 ಅಂಕಗಳೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿದ್ದರೆ, ಸ್ವಾಮಿ ಎಸ್.ಎಂ. -592 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ, ಮೊಹಮದ್ ರಫೀಕ್ -591 ಅಂಕಗಳೊಂದಿಗೆ ತೃತೀಯ ಸ್ಥಾನ ಹಾಗೂ ಗೀತಾ ದೊಗ್ಗಳ್ಳಿ- 591 ನಾಲ್ಕನೇ ಸ್ಥಾನದಲ್ಲಿದ್ದಾರೆ. . ಇನ್ನು ವಾಣಿಜ್ಯ ವಿಭಾಗದಲ್ಲಿ ಸಿ.ಎಸ್.ಅರವಿಂದ ಶ್ರೀವತ್ಸ – 598 ಅಂಕ ಪಡೆದು ಟಾಪರ್ ಆಗಿದ್ದು, ಬೃಂದಾ- 596 ಅಂಕಗಳೊಂದಿಗೆ ದ್ವೀತೀಯ ಸ್ಥಾನದಲ್ಲಿದ್ದರೆ, ಸಿಂಧು- 595 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss