Monday, August 8, 2022

Latest Posts

ದ್ವೀಪ ರಾಷ್ಟ್ರ ಲಂಕೆಯಲ್ಲೂ ಇಲ್ಲ ಈ ಬಾರಿ ದೀಪಾವಳಿಯ ಗೌಜಿ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಈ ಬಾರಿ ಶ್ರೀಲಂಕಾದಲ್ಲಿಯೂ ದೀಪಾವಳಿ ಸಂಭ್ರಮ ಕಳೆಗುಂದಿದೆ.
ಕೊರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭ ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಹಬ್ಬದ ಚಟುವಟಿಕೆಗಳನ್ನು ಮೊಟಕುಗೊಳಿಸುವಂತೆ ಗುರುವಾರ ಶ್ರೀಲಂಕಾ ಸರ್ಕಾರ ತನ್ನ ದೇಶದ ಹಿಂದು ಸಮುದಾಯಕ್ಕೆ ಮನವಿ ಮಾಡಿದೆ.
ಹಬ್ಬ ಆಚರಣೆ ಸಂದರ್ಭ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಲ್ಲಿನ ಚಹಾ ತೋಟಗಳಲ್ಲಿ ಕೆಲಸ ಮಾಡುವ ಭಾರತ ಮೂಲದ ತಮಿಳರಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಶ್ರೀಲಂಕಾದಲ್ಲಿ ೬೪೪ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಅಲ್ಲಿನ ಶ್ರೀಲಂಕಾದಲ್ಲಿ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ ೧೫,೩೫೦ಕ್ಕೆ ಏರಿದೆ. ೫,೧೨೧ ಸಕ್ರಿಯ ಪ್ರಕರಣಗಳು ಅಲ್ಲಿದ್ದು, ೫೨೩ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ೪೬ ಮಂದಿ ಸಾವನ್ನಪ್ಪಿದ್ದಾರೆ.
ಕೊರೋನಾ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss