ಎಷ್ಟರ ಮಟ್ಟಿಗೆ ಒಬ್ಬ ವ್ಯಕ್ತಿಯ ಮೇಲೆ ದ್ವೇಷ ಇಟ್ಟುಕೊಳ್ಳಬಹುದು? ದ್ವೇಷ ಇಟ್ಟುಕೊಂಡರೆ ನಮಗೇನು ಹಾನಿಯಾಗುತ್ತದೆ? ನೋಡೋಣ ಬನ್ನಿ..
ಶಾಲೆಯಲ್ಲಿ ಶಿಕ್ಷಕರೊಬ್ಬರು ಮಕ್ಕಳಿಗೆ ದ್ವೇಷದ ಬಗ್ಗೆ ಅರಿವು ನೀಡಬೇಕು ಎಂದು ನಿರ್ಧರಿಸಿದ್ದರು. ಮಕ್ಕಳಿಗೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ನೀವು ಎಷ್ಟು ಜನರನ್ನು ದ್ವೇಷಿಸುತ್ತೀರೋ ಅಷ್ಟು ಆಲೂಗಡ್ಡೆಗಳನ್ನು ಹಾಕಿಕೊಂಡು ಬನ್ನಿ ಎಂದರು.
ಮಕ್ಕಳು ಇದಕ್ಕೆ ಒಪ್ಪಿದರು. ಮರುದಿನ ಒಬ್ಬೊಬ್ಬರ ಕೈಯಲ್ಲಿ ಒಂದು ಕವರ್. ಅದರಲ್ಲಿ ಮೂರು, ಎರಡು, ಐದು ಹೀಗೆ ಆಲೂಗಡ್ಡೆಗಳಿದ್ದವು. ಶಿಕ್ಷಕಿ “ಇನ್ನು ಒಂದು ವಾರ ನೀವೆಲ್ಲಿ ಹೋದರೂ ಈ ಆಲೂಗಡ್ಡೆ ನಿಮ್ಮ ಜೊತೆಯೇ ಇರಬೇಕು’ ಎಂದರು. ಇದಕ್ಕೆ ಮಕ್ಕಳು ಒಪ್ಪಿದರು. ಐದು ಆಲೂಗಡ್ಡೆ ಇಟ್ಟುಕೊಂಡ ಮಕ್ಕಳಿಗೆ ಭಾರಕ್ಕೆ ಸಿಟ್ಟು ಬರುತ್ತಿತ್ತು. ನಾಲ್ಕು ದಿನಗಳ ಬಳಿಕ ಆಲೂಗಡ್ಡೆಯ ಕೊಳೆತ ವಾಸನೆ ಮಕ್ಕಳಿಗೆ ರೋಸು ಬರಿಸುವಂತಿತ್ತು. ಒಂದು ವಾರದ ಬಳಿಕ ಕೊಳೆತ ಆಲೂಗಡ್ಡೆಗಳನ್ನು ಶಿಕ್ಷಕಿ ಬಿಸಾಡಲು ಹೇಳಿದರು. ಇದಕ್ಕೆ ಮಕ್ಕಳು ಖುಷಿಯಿಂದ ಒಪ್ಪಿದರು. ಎಷ್ಟು ಭಾರ ಕಡಿಮೆಯಾದಂತಿದೆ ಎಂದು ಖುಷಿ ಪಟ್ಟರು.
ಇದರಿಂದ ನೀವೇನು ಕಲಿತಿರಿ?
ದ್ವೇಷ ಕೊಳೆತ ಆಲೂಗಡ್ಡೆಯಂತೆ, ಎಷ್ಟು ದಿನ ಇಟ್ಟುಕೊಳ್ಳುತ್ತೀರೋ ಅಷ್ಟು ವಾಸನೆ ಬರುತ್ತೀರ ಎಂದು ಹೇಳಿದರು. ಯೋಚನೆ ಮಾಡಿ ಇದು ಕೇವಲ ಮಕ್ಕಳ ಕಥೆಯಲ್ಲ, ದೊಡ್ಡವರ ಕಥೆಯೂ ಹೌದು..