Tuesday, June 28, 2022

Latest Posts

ದ.ಕ.ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪ್ರಕರಣ: 10 ತಿಂಗಳ ಮಗುವಿಗೆ ಕೊರೋನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪ್ರಕರಣ ಕಂಡುಬಂದಿದೆ. ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಗಂಡು ಮಗುವಿನಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 6 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಂತಾಗಿದೆ.
ಸಜಿಪನಡುವಿನ 10 ತಿಂಗಳ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೊಳಪಡಿಸಿದಾಗ ಕೊರೋನಾ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ಮನೆಯಲ್ಲಿದ್ದ ಎಲ್ಲಾ ಆರು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಕಾರಿ ರಾಮಚಂದ್ರ ಬಾಯಾರಿ ತಿಳಿಸಿದ್ದಾರೆ.
ಕೇರಳಕ್ಕೆ ಹೋಗಿ ಬಂದಿದ್ದ ಕುಟುಂಬ
ಮಗುವಿನಲ್ಲಿ ಕೊರೋನಾ ಸೊಂಕು ಕಂಡು ಬಂದ ಕುಟುಂಬ ಇತ್ತೀಚೆಗಷ್ಟೇ ಕೇರಳಕ್ಕೆ ಹೋಗಿ ಬಂದಿತ್ತು ಎನ್ನಲಾಗಿದೆ. ಬರುವಾಗಲೇ ಮನೆ ಮಂದಿ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಇದೀಗ ಮಗುವಿನಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಹುಟ್ಟಿಸಿದೆ.. ಈ ಹಿನ್ನೆಲೆಯಲ್ಲಿ ಇಡೀ ಕುಟುಂಬವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅಲ್ಲದೆ ಅಕ್ಕ ಪಕ್ಕದ ಮನೆಯವರ ಮೇಲೂ ನಿಗಾ ಇರಿಸಲಾಗಿದೆ.
ಕ್ವಾರಂಟೈನ್ ನಲ್ಲಿ ಇಡೀ ಗ್ರಾಮ
ಸಜಿಪನಡು ಗ್ರಾಮದಲ್ಲಿ ಈ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಗ್ರಾಮವನ್ನು ಕ್ವಾರಂಟೈನ್‌ನಲ್ಲಿದೆ. ಮುಂಜಾಗೃತಾ ಕ್ರಮವಾಗಿ ಈ ಗ್ರಾಮಕ್ಕೆ ಹೊರಗಿನವರಿಗೆ ಪ್ರವೇಶ ನಿಬಂಧ ವಿಸಲಾಗಿದೆ. ಅಲ್ಲದೆ ಈ ಗ್ರಾಮದಿಂದಲೂ ಯಾರನ್ನೂ ಬೇರೆಡೆ ಹೋಗುವುದಕ್ಕೆ ಕಡಿವಾಣ ಹಾಕಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss