Sunday, January 24, 2021

Latest Posts

ಧಮಾ೯ಪುರ ಬಳಿ ಅಪಘಾತ: ಯುವತಿ ಸಾವು

ಹೊಸದಿಗಂತ ವರದಿ ಕಲಬುರಗಿ:

ತಾಲೂಕಿನ ಧರ್ಮಾಪೂರ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕಲಬುರಗಿಯಿಂದ ಮರತೂರ ಹೋಗುವ ಮಾರ್ಗದಲ್ಲಿ ಅಪರಿಚಿತ ನಾಲ್ಕು ಚಕ್ರದ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡಿದ ಪರಿಣಾಮವಾಗಿ ಯುವತಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ಪ್ಲೇಸರ್ ಸ್ಕೂಟಿ ಗಾಡಿಯ ಮೇಲೆ ಹೊರಟಿದ್ದ ಎಂಬಿಬಿಎಸ್ ಮುಗಿಸಿ, ಎಂ.ಡಿ. ಓದುತ್ತಿರುವ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರೀತಿ ಎಂಬ 21 ವರ್ಷದ ಯುವತಿಯೇ ಸಾವನ್ನಪ್ಪಿದ ನೃತದೃಷ್ಟಿಯಾಗಿದ್ದಾಳೆ.
ಮೃತಪಟ್ಟ ಯುವತಿ ಭಂಕೂರ ನಿವಾಸಿಯಾಗಿದ್ದಾಳೆ. ಮೇಲೆ ಯುವತಿ ಕಲಬುರಗಿಯಿಂದ ಮರತೂರ ಹೋಗುವಾಗ ಮಾರ್ಗ ಮಧ್ಯದಲ್ಲಿರುವ ಧರ್ಮಾಪೂರ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕಲಬುರಗಿ ಸಂಚಾರಿ ಪೋಲಿಸ್ ಠಾಣೆ-2ರಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಪೋಲಿಸರು ಕೈಗೊಂಡಿದ್ದಾರೆ. ಅಫಘಾತದಲ್ಲಿ ಮೃತಪಟ್ಟಿ ಯುವತಿಯ ಶವ ಪರೀಕ್ಷೆ ನಡೆಯುತ್ತಿದ್ದು, ವಾಹನಕ್ಕೆ ಡಿಕ್ಕಿ ಹೊಡೆದ ಪ್ರಕರಣದ ಕುರಿತು ತನಿಖೆ ನಡೆದಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!