Wednesday, August 17, 2022

Latest Posts

ಧರೆಗೆ ಉರುಳಿದ 400 ವರ್ಷಗಳ ಅರಳಿ‌ಮರ, ಮನೆಗಳಿಗೆ ಧಕ್ಕೆ, ಪರಿಹಾರಕ್ಕೆ ಒತ್ತಾಯ

ಕೊಪ್ಪಳ: ಸುಮಾರು 400 ವರ್ಷಗಳ ಇತಿಹಾಸ ವಿರುವ ಬೃಹತ್ ಅರಳಿಮರ ಧರೆಗೆ‌ ಉರುಳಿದ್ದು, ವ್ಯಾಪ್ತಿಯ ಮನೆಗಳಿಗೆ ಅಪಾರ ಪ್ರಮಾಣದ ಹಾನಿಯುಂಟಾದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ನಡೆದಿದೆ.‌ ಸುಮಾರು ವರ್ಷಗಳ ಇತಿಹಾಸವಿರುವ ಅರಳಿಮರದ‌ ಬೃಹತ್ ಕೊಂಬೆಯೊಂದು ಇದ್ದಕ್ಕಿದ್ದಂತೆ ಧರೆಗೆ ಉರುಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಆದರೇ, ಸುತ್ತಲಿನ ಮನೆಗಳಿಗೆ ಹಾನಿಯುಂಟಾಗಿದ್ದು, ನಾಲ್ಕಕ್ಕೂ ವಿದ್ಯುತ್ ಕಂಬಗಳು ಜಖಂಗೊಂಡಿವೆ. ಮರ ಉರುಳಿರುವ ಸುದ್ದಿ ತಿಳಿಯುತ್ತಿದ್ದಂತೆ ತಂಡೊಪ ತಂಡವಾಗಿ ಜನರು ಆಗಮಿಸಿ ವೀಕ್ಷಿಸಿದರು. ಸುತ್ತಲೂ 25ಕ್ಕೂ ಹೆಚ್ಚು ಮನೆಗಳಿದ್ದು, ನಿತ್ಯ ಜನ ಜಂಗುಳಿ, ಮಕ್ಕಳು ಆಟವಾಡುವುದು ಸಾಮಾನ್ಯವಾಗಿದ್ದು, ಪವಾಡ ಎನ್ನುವಂತೆ ಯಾರಿಗೂ ತೊಂದರೆಯಾಗಿಲ್ಲ. ಆದರೆ, ಮನೆಗಳ‌ ಮೇಲೆ ಕೊಂಬೆಗಳು ಬಿದ್ದಿದ್ದು, ಸಾಕಷ್ಟು ಪ್ರಮಾಣದಲ್ಲಿ ನಷ್ಟು ಉಂಟಾಗಿದೆ.ನೆಲಕ್ಕುರುಳಿದ‌ ಬೃಹತ್ ಮರ: ಸುಮಾರು 400 ವರ್ಷಗಳ ಇತಿಹಾಸವಿರುವ ಅರಳಿಮರ ಇದ್ದಕ್ಕಿದ್ದಂತೆ ‌ನೆಲಕ್ಕುರುಳಿದ್ದು, ಶತಮಾನದ ನೆರಳೊಂದು ನೆಲಕಚ್ಚಿದಂತಾಗಿದೆ. ಜೇನು ಸೇರಿದಂತೆ ವಿವಿಧ ಪಕ್ಷಿಗಳ ಸಂಕುಲಗಳಿಗೆ ಆಸರೆಯಾಗಿದ್ದ, ಮರವೊಂದು ನೆಲಕ್ಕುರುಳಿದೆ. ನಿತ್ಯ ವ್ಯಾಪ್ತಿಯ ನಿವಾಸಿಗಳು ಮರಕ್ಕೆ ವಿಶೇಷ ಪೂಜೆ ಮಾಡುತ್ತಿದ್ದು, ಪವಾಡ ರೀತಿಯಲ್ಲಿ ಯಾರಿಗೂ ತೊಂದರೆಯಾಗದೇ ಪಾರಾಗಿದ್ದಾರೆ. ಅಚ್ಚರಿಯ ರಿತಿಯಲ್ಲಿ 700 ವರ್ಷಗಳ ಹಳೆಯದಾದ ಹುಣಸಿ ಮರಕ್ಕೆ ಯಾವುದೇ ದಕ್ಕೆಯಾಗಿಲ್ಲ. ಇದರ ಜೊತೆಗೆ ಪಕ್ಕದಲ್ಲೇ ಜಕಣಾಚಾರ್ಯರು ನಿರ್ಮಿಸಿದ್ದ ಪುರಾತನ ಶ್ರೀ ಈಶ್ವರ ದೇವಾಲಯಕ್ಕೂ ಯಾವುದೇ ದಕ್ಕೆಯಾಗಿಲ್ಲ. ಔಷಧಿ ಗುಣವನ್ನು ಹೊಂದಿದ ಬೃಹತ್ ಅರಳಿಮರ ಗ್ರಾಮದ ನಾಲ್ಕು ತಲೆಮಾರುಗಳಿಗೆ ಸಾಕ್ಷೀಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!