Wednesday, August 10, 2022

Latest Posts

ಧಾರವಾಡ: ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಮೃತ್ಯುಂಜಯ ಹೋಮ

ಹೊಸದಿಗಂತ ವರದಿ, ಧಾರವಾಡ

ಧರ್ಮಶಾಸ್ತಾ ಸೇವಾ ಸಮಿತಿಯಿಂದ ಪ್ರತಿವರ್ಷದಂತೆ ಅಯ್ಯಪ್ಪ ಸ್ವಾಮೀಯ ಮಹಾಪೂಜೆ, ಮೃತ್ಯುಂಜಯ ಹೋಮ, ಪಾರ್ವತಿ ಅಮ್ಮನವರ ಸಹಸ್ರ ನಾಮಾವಳಿ ಪಟಣ ಕಾರ್ಯಕ್ರಮ ಜ.10ರಂದು ನಡೆಯಲಿದೆ ಎಂದು ಗುರುಸ್ವಾಮಿ ರಮೇಶ ಪಾತ್ರೋಟ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪ್ರಾತಃಕಾಲ 4.30ಕ್ಕೆ ವಿಶ್ವದ ಜನರ ಆರೋಗ್ಯ ದೃಷ್ಟಿಯಿಂದ ಉಡುಪಿಯ ಶ್ರೀಧರ ಭಟ್ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ಹಾಗೂ ಯಜ್ಞ ನಡೆಯಲಿದೆ ಎಂದರು.

ಪ್ರಸಕ್ತ ಕೋರೋನಾ ಹಿನ್ನಲೆ ಅಯ್ಯಪ್ಪ ಸ್ವಾಮಿ ಅಂಬಾರಿ ಮೆರವಣಿಗೆ ರದ್ದುಪಡಿಸಿದೆ. ಸಾಮಾಜಿಕ ಅಂತರ ಪಾಲನೆ ಹಾಗೂ ಮಾಸ್ಕ್ ಧಾರಣೆ ಸೇರಿ ಕೋವಿಡ್ ನಿಯಮಗಳಡಿ ಈ ಕಾರ್ಯಕ್ರಮ ನಡೆಯಲಿದೆ. ಕೇವಲ 100 ಜನ ಅಯ್ಯಪ್ಪ ಸ್ವಾಮಿಗಳಿಗೆ ಆಮಂತ್ರಿಸಿದೆ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಾಧೀಶ ಕೆ.ನಟರಾಜ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಬೆಳಿಗ್ಗೆ 11.30ಕ್ಕೆ ಪಡಿಪೂಜೆ, 12ಕ್ಕೆ ಕುಂಭ ಮೆರವಣಿಗೆ, 1.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಾಯಿ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಅಯ್ಯಪ್ಪ ಸನ್ನದಿಯಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉದಯ ಶೆಟ್ಟಿ, ವಿವೇಕ ಜೈನ್, ಗಿರೀಶ ಮಂಗೋಡಿ, ಕೆ.ಎಚ್.ಬಾಗಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss