ಧಾರವಾಡದಲ್ಲಿ ಕೊರೋನಾ ಅಟ್ಟಹಾಸ: 17 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢ

0
95

ಧಾರವಾಡ: ಸಾಹಿತಿಗಳ ತವರೂರಾದ ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ನಿತ್ಯವೂ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸೋಮವಾರವೂ 17 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 328ಕ್ಕೆ ಏರಿಕೆಯಾಗಿದೆ.
ಸೋಮವಾರ ಬಿಡುಗಡೆಗೊಂಡ ಆರೋಗ್ಯ ಇಲಾಖೆ ವರದಿಯಲ್ಲಿ ನಾಲ್ವರು ಯುವಕ-ಯುವತಿಯರಲ್ಲಿ, ಇಬ್ಬರು ವೃದ್ಧರಲ್ಲಿ ಹಾಗೂ 11 ಜನ ಮಧ್ಯವಸ್ಕರಲ್ಲಿ ಸೋಂಕು ದೃಢಪಡುವ ಮೂಲಕ ಸಾರ್ವಜನಿಕರ ಆತಂಕ ಮತ್ತುಷ್ಟು ಹೆಚ್ಚಿಸಿದೆ. ಈವರೆಗೂ ಆರು ಜನ ಮೃತಪಟ್ಟಿದ್ದಾರೆ.
ಅಲ್ಲದೇ, ಸೋಂಕಿನಿAದ ಸೋಮವಾರ 11 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೂ ಜಿಲ್ಲೆಯಲ್ಲಿ 175 ಜನ ಗುಣವಾಗಿದ್ದು, 147 ಪಾಸಿಟಿವ್ ಸಕ್ರೀಯ ಪ್ರಕರಣಗಳಿದ್ದು, ಕಿಮ್ಸ್ನಲ್ಲಿ ಚಿಕಿತ್ಸೆ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here