ಧಾರವಾಡದಲ್ಲಿ ಧಾರಾಕಾರ ಮಳೆ: ನೀರಿನ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ!

0
175

ಧಾರವಾಡ: ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಹಾರೋಬೆಳವಡಿ ಗ್ರಾಮದ ವ್ಯಕ್ತಿಯೊಬ್ಬ ನೀರಿನ ರಭಸಕ್ಕೆ ಕೊಚ್ಚಿಹೋದ ಘಟನೆ ನಡೆದಿದೆ. ಮಡಿವಾಳಪ್ಪ ಜಕ್ಕಣ್ಣವರ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ.
ಜಾನುವಾರು ಮೇಯಿಸಲು ಹೋಗಿದ್ದ ಮಡಿವಾಳಪ್ಪ ಮನೆಗೆ ಹಿಂದಿರುಗವ ವೇಳೆ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದ ರಕ್ಷಣೆ ಪಡೆಯಲು ಹಾರೋಬೆಳವಡಿ ಹಾಗೂ ಆಯಟ್ಟಿ ಗ್ರಾಮದ ಸೇತುವೆ ಕೆಳೆಗೆ ನಿಂತಿದ್ದಾನೆ. ನೋಡ ನೋಡುತ್ತಿದ್ದಂತೆ ಏರಿನ ಮಟ್ಟವು ಜಾಸ್ತಿಯಾಗಿದೆ.
ಬೆಳಗಾವಿ ಗಡಿಭಾಗದಲ್ಲೂ ಧಾರಕಾರ ಮಳೆ ಸುರಿದ ಹಿನ್ನಲೆಯಲ್ಲಿ ಹಳ್ಳದಲ್ಲಿ ನೀರಿನ ಹರಿವು ಜಾಸ್ತಿಯಾಗಿದೆ. ಈಜುಬಾರದ ಮಡಿವಾಳಪ್ಪ ನೀರನ ರಬಸಕ್ಕೆ ಸಿಲುಕಿ ಕೆಲಕಾಲ ಪರದಾಡಿದ್ದಾನೆ. ನಂತರ ನೀರಿನ ಒತ್ತಡಕ್ಕೆ ತೇಲಿ ಹೋಗಿದ್ದು, ಹಾರೋಬೆಳವಡಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇದಕ್ಕೂ ಮೊದಲು ಹಗ್ಗದ ಸಹಾಯದಿಂದ ಆತನ ರಕ್ಷಣೆ ಮಾಡಿದ ಪ್ರಯತ್ನ ವಿಫಲವಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಈಗ ಗ್ರಾಮಸ್ಥರು ಪೊಲೀಸರ ಸಹಾಯದಿಂದ ಮಡಿವಾಳಪ್ಪನ ಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here