ಹೊಸದಿಗಂತ ಆನ್ಲೈನ್ ಡೆಸ್ಕ್:
ಧಾರವಾಡ ಸಮೀಪದ ಇಟ್ಟಿಗೆಹಳ್ಳಿಯಲ್ಲಿ ನಡೆದ ಬೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ ಹಚ್ಚಲು ಸ್ವತಃ ಕುಟುಂಬದವರೇ ಕೆಲ ಕಾಲ ಪರದಾಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ಗೆ ತರಲಾಗಿತ್ತು. ಇಲ್ಲಿ ಮೃತಪಟ್ಟವರ ಮನೆಯವರು ಧಾವಿಸಿದ್ದರು. ಕೆಲವರ ಮುಖಗಳು ಗುರುತು ಸಿಗದಷ್ಟು ಪೆಟ್ಟಾಗಿದ್ದವು. ಅವರು ಹಾಕಿದ ಬಟ್ಟೆ ಆಧಾರದ ಮೇಲೆ ಅವರನ್ನು ಗುರುತಿಸಲಾಗಿತ್ತು. ಶವಗಳು ಪತ್ತೆಯಾದಂತೆಯೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.