Friday, August 12, 2022

Latest Posts

ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪನೆಗೆ ರೂ.32 ಲಕ್ಷ ದೇಣಿಗೆ ನೀಡಿದ ರವಿ-ಜಯಾ ದಂಪತಿ

 ಧಾರವಾಡ: ನ್ಯೂಯಾರ್ಕ್ನಲ್ಲಿ ವಾಸವಾದ ಧಾರವಾಡದ ರವಿ-ಜಯಾ ದಂಪತಿಗಳು ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪನೆಗೆ ರೂ.32.30 ಲಕ್ಷ ಕೊಡುಗೆ ಮತ್ತು ನ್ಯೂಯಾರ್ಕ್ ರೋಟರಿ ಜಿಲ್ಲೆಯಿಂದ ಸಹಾಯ ಮಾಡಿದ್ದಾರೆಂದು ಡಾ. ಕವನ ದೇಶಪಾಂಡೆ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮಾಜಿ ಅಧ್ಯಕ್ಷ ಡಾ. ಕವನ ದೇಶಪಾಂಡೆ ಮತ್ತು ಕಿರಣ ಹಿರೇಮಠ ನೇತೃತ್ವದಲ್ಲಿ ರೋಟರಿ ಫೌಂಡೇಶನ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಲೊಜಿಸ್ಸಿಮೊ ಇಂಡಿಯಾ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.
ಈ ಕೋವಿಡ್ ವಾರ್ಡ್ ರವಿ ಮತ್ತು ಜಯಾ ಭೂಪಳಾಪುರ ಅವರ ಹೆಸರಿನಲ್ಲಿ ನಿರ್ಮಾಣಗೊಳ್ಳಲಿದೆ. ಭೂಪಳಾಪುರ ದಂಪತಿಗಳು ಧಾರವಾಡಕ್ಕೆ ನೀಡಿರುವ ಕೊಡುಗೆ ಅಪಾರ. ಧಾರವಾಡದ ಜನತೆಯ ಸೇವೆಯಲ್ಲಿ ಇವರು ಸದಾ ಸಿದ್ಧ್ದ. ಇತ್ತೀಚೆಗೆ ಎರಡು ಸುಸಜ್ಜಿತ ತುರ್ತು ಚಿಕಿತ್ಸಾ ಸಾಧನ ಒಳಗೊಂಡ ಆಂಬುಲೆನ್ಸ್ ಪೊಲೀಸ್ ಇಲಾಖೆಗೆ ನೀಡಿದ್ದು ಸ್ಮರಿಸಿದರು.
ಈಗಲೂ ಬಡ ರೋಗಿಗಳಿಗೆ ಅನುಕೂಲಕ್ಕೆೆ ಈ ವಿಶೇಷ ತುರ್ತು ಚಿಕಿತ್ಸಾ ಘಟಕವನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ನೀಡುತ್ತಿದ್ದಾರೆ. ಈ ಹೃದಯವಂತ ದಂಪತಿಗಳು ಅವರಿಗೆ ಧಾರವಾಡದ ಜನತೆಯ ಪರವಾಗಿ ಧನ್ಯವಾದಗಳು ಎಂದರು. ಸುದ್ದಿಗೋಷ್ಠಿಯಲ್ಲಿ ಕಿರಣ ಹಿರೇಮಠ, ರವಿ ಶುರ್ಪಾಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss