ಧಾರವಾಡ: ಎಪಿಎಂಸಿಯಿಂದ ಅಕ್ರಮವಾಗಿ ಮುಂಬಯಿಗೆ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆಯ 220 ಕ್ವಿಂಟಾಲ್ ಅಕ್ಕಿಯನ್ನು ಖಚಿತ ಮಾಹಿತಿ ಮೇರೆಗೆ ಧಾರವಾಡ ಸಮೀಪದ ನರೇಂದ್ರ ಕ್ರಾಸ್ ನಲ್ಲಿ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಹಾಗೂ ಧಾರವಾಡ ಗ್ರಾಮೀಣ ಪೊಲೀಸರು ವಶಪಡಿಸಿಕೊಂಡು ಆಹಾರ ,ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹಸ್ತಾಂತರಿಸಿದ್ದಾರೆ.