Monday, August 8, 2022

Latest Posts

ಧಾರವಾಡ| ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯಲ್ಲಮ್ಮ ದೇವಸ್ಥಾನದ ಮೃತ್ತಿಕೆ-ಜಲ ಸಂಗ್ರಹ

ಧಾರವಾಡ: ಜಿಲ್ಲಾ ವಿಶ್ವ ಹಿಂದು ಪರಿಷತ್ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪೂರೈಸಲು ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದ ಜಲ ಮತ್ತು ಮೃತ್ತಿಕೆಗಳನ್ನು ಮಂಗಳವಾರ ಸಂಗ್ರಹಿಸಲಾಯಿತು.
ಆ.೫ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲಿಡುವ ಕಾರ್ಯ ನೆರವೇರುವ ಹಿನ್ನೆಲೆ ಯಲ್ಲಮ್ಮದೇವಿ ದೇವಸ್ಥಾನದ ಮೃತ್ತಿಕೆ, ದೇವಸ್ಥಾನ ಹೊಂಡದ ಪವಿತ್ರ ಜಲವನ್ನು ಸಂಗ್ರಹಿಸಲಾಯಿತು.
ಪುರಾತನ ಇತಿಹಾಸದ ಯಲ್ಲಮ್ಮ ದೇವಸ್ಥಾನದಲ್ಲಿ ಧಾರವಾಡ ಜಿಲ್ಲಾ ವಿಶ್ವ ಹಿಂದು ಪರಿಷತ್ ಹಾಗೂ ಬೆಳಗಾವಿ ಜಿಲ್ಲಾ ವಿಶ್ವ ಹಿಂದು ಪರಿಷತ್ ವತಿಯಿಂದ ಜಂಟಿಯಾಗಿ ಪೂಜಾ ಕಾರ್ಯ ನೆರವೇರಿಸಿ ಸಂಗ್ರಹಿಸಿದರು.
ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಡಾ. ಎಸ್.ಆರ್.ರಾಮನಗೌಡರ ಮನೆಯಲ್ಲಿ ಸಂಗ್ರಹಿಸಿದ ಮೃತ್ತಿಕೆ ಮತ್ತು ಪವಿತ್ರ ಜಲಕ್ಕೆ ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಸಂಘಟನಾ ಮಂತ್ರಿ ಮನೋಹರ ಮಠದ, ಜಿಲ್ಲಾಧ್ಯಕ್ಷ ಎಸ್.ಎಚ್.ಪಾಟೀಲ, ಉಪಾಧ್ಯಕ್ಷ ಬಸವರಾಜ ಕೌಜಲಗಿ, ಪ್ರಧಾನ ಕಾರ್ಯದರ್ಶಿ ಡಾ.ರವಿಕುಮಾರ ಪಟ್ಟಣಶೆಟ್ಟಿ, ವಿರುಪಾಕ್ಷಿ ಜೋಡಳ್ಳಿ, ಸೋಮಶೇಖರ್ ಅಳಂದ, ಲಕ್ಷö್ಮಣ ಹೂಗಾರ, ವಿಜಯ ಪಾಟೀಲ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss