Wednesday, August 10, 2022

Latest Posts

ಧಾರವಾಡ: ಇಬ್ಬರು ಯುವಕರಿಗೆ ಚೂರಿ ಇರಿತ

ಧಾರವಾಡ: ಕ್ಷಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಇಬ್ಬರಿಗೆ ಚಾಕು ಇರಿದ ಆರೋಪಿಗಳು ಪರಾರಿಯಾದ ಘಟನೆ ಸ್ಥಳೀಯ ಸಪ್ತಾಪೂರ ಸರ್ಕಲ್ ಬಳಿ ನಡೆದಿದೆ. ಯತ್ತಿನಗುಡ್ಡದ ಚಾಕು ಇರಿತಕ್ಕೆ ಒಳಗಾದವರನ್ನು ಉದಯ ಕೆಲಗೇರಿ ಎಂದು ಗುರುತಿಸಿದ್ದು, ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ.

ಮದಾರಮಡ್ಡಿ ಮೈದಾನದಲ್ಲಿ ಕ್ರಿಕೆಟ್ ಆಟದಲ್ಲಿ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು. ಸಂಜೆ ಉದಯ ಕೆಲಗೇರಿಗೆ ಕರೆ ಮಾಡಿದ ಸುರೇಶ ಅವರಾದಿ ಹಾಗೂ ಮನೋಜ ಜಮನಾಳ ಸಪ್ತಾಪೂರ ಸರ್ಕಲ್‌ಗೆ ಬಂದರೆ, ಜಗಳ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ, ಅಲ್ಲಿಗೆ ಬಂದಾಗ ಮಾರಣಾಂತಿಕ ಹಲ್ಲೆ ನಡೆದಿದೆ.

ನಾಗರಾಜ ಹೊಂಗಣ್ಣವ, ಆದರ್ಶ ನಾಯಕ, ವಿರೇಶ ಸೊಟ್ಟನಾಳ, ಭರತ ಕರೆಣ್ಣವರ, ದತ್ತು ಅಲಿಯಾಸ್ ಸಂಗಮೇಶ ಕಮಾಟಿ ಹಾಗೂ ವಿನಾಯಕ ಕಲಬುರ್ಗಿ ಹಲ್ಲೆ ಮಾಡಿದ ವ್ಯಕ್ತಿಗಳು. ಚಾಕು ಇರಿತದ ಘಟನೆಯಿಂದ ಸಪ್ತಾಪೂರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಚಾಕು ಹಾಗೂ ಬಿಯರ್ ಬಾಟಲಿಗಳಿಂದ ಹಲ್ಲೆ ಮಾಡಲಾಗಿದೆ. ಅಲ್ಲದೇ, ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಲಾಗಿದೆ. ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ದಾಖಲಾಗಿದೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss