Monday, July 4, 2022

Latest Posts

ಧಾರವಾಡ ಉದ್ಯಮಿಗಳಿಗೆ ಬೆದರಿಕೆ ಆರೋಪ: ಭೂಗತ ಪಾತಕಿ ಬಚ್ಚಾಖಾನ್ ಪೊಲೀಸರ ವಶಕ್ಕೆ

ಹೊಸದಿಗಂತ ವರದಿ,ಧಾರವಾಡ:

ಉದ್ಯಮಿಗಳಿಗೆ ಬೇದರಿಕೆ ಹಾಕಿದ ಆರೋಪದಡಿ ಭೂಗತ ಪಾತಕಿ ಬಚ್ಚಾಖಾನ್‌ನ್ನು ನಾಲ್ಕು ದಿನ ಉಪನಗರ ಠಾಣೆ ಪೊಲೀಸರ ವಶಕ್ಕೆ ನೀಡಿ, ಧಾರವಾಡದ ಪ್ರಧಾನ ಜಿಲ್ಲಾ ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಧಾರವಾಡದ ವಿವಿಧ ಉದ್ಯಮಿಗಳಿಗೆ ಬೇದರಿಕೆ ಹಾಕಿದ ಆರೋಪದ ಮೇರೆಗೆ ಭಾನುವಾರ ರಾತ್ರಿ ಮೈಸೂರು ಕಾರಾಗೃಹದಿಂದ ಬಚ್ಚಾಖಾನ್ ಕರೆತಂದ ಉಪನಗರ ಠಾಣೆ ಪೊಲೀಸರು ಸೋಮವಾರ ನ್ಯಾಯಾಲಯದ ಎದುರಿಗೆ ಹಾಜರಪಡಿಸಿದರು. ಬಚ್ಚಾಖಾನ್ ಜೈಲಿನಲ್ಲಿ ಯಾರ ಜೊತೆಯೂ ಮಾತನಾಡಿಲ್ಲ. ಹೀಗಾಗಿ ಅವರನ್ನು ಪೊಲೀಸರ ವಶಕ್ಕೆ ನೀಡದಂತೆ ಬಚ್ಚಾಖಾನ್ ಪರ ವಕೀಲರು ವಾದ ಮಂಡಿಸಿದರು.

ಬಚ್ಚಾಖಾನ್ ಉದ್ಯಮಿಗಳಿಗೆ ಬೇದರಿಕೆ ಹಾಕಿದ್ದು ಸತ್ಯ. ವಿಚಾರಣೆಗೆ ನಾಲ್ಕು ದಿನ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ಡಿ.31ರವರೆಗೆ ಬಚ್ಚಾಖಾನ್‌ನ್ನು ಉಪನಗರ ಪೊಲೀಸರ ವಶಕ್ಕೆ ನೀಡಿ, ಡಿ.31ರ ಸಂಜೆ 5ಕ್ಕೆ ನ್ಯಾಯಾಲಯಕ್ಕೆ ಹಾಜರಪಡಿಸುವಂತೆ ಆದೇಶಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss