Thursday, July 7, 2022

Latest Posts

ಧಾರವಾಡ ಎಸ್ಪಿ ಕಚೇರಿಗೆ ವಕ್ಕರಿಸಿದ ಕೊರೋನಾ ಸೋಂಕು

ಧಾರವಾಡ: ಕೊರೋನಾ ಎಂಬ ಕೆಂಭೂತ ಸರ್ಕಾರ ಕಚೇರಿಗಳನ್ನು ಬೆಂಬಿಡದೆ ಕಾಡುತ್ತಿದೆ. ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಿಬ್ಬಂದಿಯೋರ್ವನಲ್ಲೂ ಸೋಂಕು ದೃಢಪಟ್ಟಿದೆ.
ಅಲ್ಲದೇ, ಉಳಿದ ಸಿಬ್ಬಂದಿಗೆ ಎರಡು ದಿನ ಕಚೇರಿ ಆಗಮಿಸಿದಂತೆ ಎಸ್ಪಿ ವರ್ತಿಕಾ ಕಟಿಯಾರ್ ಸೂಚನೆ ನೀಡಿ, ಕಚೇರಿ ಸ್ಯಾನಿಟೈಶನ್ ಮಾಡಲು ಆದೇಶ ಮಾಡಿದ್ದಾರೆ.
ಕಚೇರಿಯ ಕಂಟ್ರೋಲ್ ರೂಂ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ ವರ್ತಿಕಾ ಅವರು, ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದು, ಅವರ ವರದಿ ನೆಗೆಟಿವ್ ಬಂದಿದೆ.
ಆದಾಗ್ಯೂ ಸಹ ಮೂರು ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಈಗಾಗಲೇ ಬಹುತೇಕ ಕಚೇರಿ ಲಗ್ಗೆ ಇಟ್ಟಿರುವ ಸೋಂಕಿನಿ0ದ ಕಚೇರಿ ಸೀಲ್‌ಡೌನ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss