Thursday, August 11, 2022

Latest Posts

ಧಾರವಾಡ| ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಭಾರಿ ಕುಲಪತಿಯಾಗಿ ಪ್ರೊ.ವಿಶ್ವನಾಥ ನೇಮಕ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರು ಖಾಯಂ ಕುಲಪತಿ ನೇಮಕದ ಬದಲಿಗೆ ನಾಲ್ಕನೇ ಬಾರಿಗೂ ಪ್ರಭಾರಿ ಕುಲಪತಿಗಳನ್ನಾಗಿ ಪ್ರೊ. ವಿಶ್ವನಾಥ ಎಂ. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಹಿಂದಿನ ಪ್ರಭಾರಿ ಕುಲಪತಿ ಪ್ರೊ.ಶಿವಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
ಪ್ರೊ. ವಿಶ್ವನಾಥ ಎಂ, ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ವಿಶ್ವವಿದ್ಯಾಲಯದ ಕಾನೂನು ನಿಖಾಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಡಿ.ಸಿ.ಪಾವಟೆ ಫೆಲೋಶಿಫ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ(ಯು.ಕೆ) ಭಾಜನರಾಗಿರುತ್ತಾರೆ.
ಕುಲಸಚಿವ ಡಾ. ಕೆ.ಟಿ.ಹನುಮಂತಪ್ಪ, ಮೌಲ್ಯಮಾಪನದ ಕುಲಸಚಿವ ಪ್ರೊ. ರವೀಂದ್ರನಾಥ ಕದಂ, ಪ್ರಭಾರಿ ಹಣಕಾಸು ಅಧಿಕಾರಿ ಪ್ರೊ. ಆರ್.ಆರ್.ಬಿರಾದಾರ ಹಾಗೂ ವಿವಿಧ ನಿಖಾಯದ ಡೀನ್‌ಗಳು, ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss