Saturday, August 13, 2022

Latest Posts

ಧಾರವಾಡ: ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

ಧಾರವಾಡ: ತಾಲೂಕಿನ ಬೋಗರ ಗ್ರಾಮದ ಪೂಜಾ ಕಂಚಿಮಠ ಹಾಗೂ ಮಾಧನಭಾವಿ ವಿದ್ಯಾಶ್ರೀ ಕಳಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಗಲ್ಲಿಗೇರಿಸುವ ಆಗ್ರಹಿಸಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ತಾಲೂಕಿನ ಬೋಗೂರ ಗ್ರಾಮದ ಪೂಜಾ ಕಂಬಿಮಠ ದೇವಸ್ಥಾನಕ್ಕೆ ಹೋಗಿ ಬರುವಾಗ ಬಶೀರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ಮನನೊಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾಧನಭಾವಿ ವಿದ್ಯಾಶ್ರೀ ಕಳಲಿ ಸಹ ಅತ್ಯಾಚಾರ ಎಸಗಿ ವಿಷ ಉಣಿಸಿ ಆಸ್ಪತ್ರೆಗೆ ದಾಖಲಿಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿದರು.

ಬಸವರಾಜ ಕೇರಾಳಿ ಅತ್ಯಾಚಾರದ ನಡೆಸಿದ ಬಗ್ಗೆ ವಿದ್ಯಾಶ್ರೀ ಅವಳ ತಂದೆ ಗರಗ ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ಠಾಣೆಯ ಪಿ.ಎಸ್.ಐ ಪ್ರಸಾದ ಪಾಳೇಕರ ಹಾಗೂ ಸಿಬ್ಬಂದಿ ರಾಜಕೀಯ ಒತ್ತಡಕ್ಕೆ ಮಣಿದು ನೊಂದ ತಂದೆಯಿoದ ದೂರು ದಾಖಲಿಸಿಕೊಳ್ಳದೇ, ದೌರ್ಜನ್ಯ ಎಸಿಗಿದ್ದಾರೆ ಎಂದು ಆಪಾದಿಸಿದರು.

ಗರಗ ಪೋಲಿಸ್ ಠಾಣೆಯ ಪಿ.ಎಸ್.ಐ ಪ್ರಸಾದ ಘಾನೇಕರ ಮೇಲೆ ಕಾನೂನು ಕ್ರಮ ಜರುಗಿಸಿಬೇಕೆಂದು ಆಗ್ರಹಿಸಿದರು. ಅತ್ಯಾಚಾರ ನಿಜಕ್ಕೂ ನಾಗರಿಕೆ ಸಮಾಜ ತಲೆ ತಗ್ಗಿಸುವ ಘಟನೆಗಳಾಗಿವೆ. ಇದರಿಂದ ಮಹಿಳೆಯರು ಮನೆಯಿಂದ ಹೊರಗಡ ಕಾಲಿಡದಂತೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.

ಅತ್ಯಾಚಾರಿಗಳಿಗೆ ಸಾದಾ ಶಿಕ್ಷೆ ವಿಧಿಸಿದೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಸಮಾಜಕ್ಕೆ ಎಚ್ಚರಿಕೆ ಸಂದೇಶ ರವಾನಿಸಲು ಮರಣ ದಂಡನೆ ಶಿಕ್ಷೆ ಗುರಿಪಡಿಸಬೇಕು. ಅಲ್ಲದೇ, ನ್ಯಾಯ ದಾನದಲ್ಲಿ ವಿಳಂಬ ಮಾಡದೆ, ತ್ವರತವಾಗಿ ವಿಲೇವಾರಿ ಮಾಡುವ ಮೂಲಕ ಸಂತ್ರಸ್ತ ಉಭಯ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss