ಧಾರವಾಡ: ದೇಶದ ಪ್ರಮುಖ ಗ್ರಾಮೀಣ ಬ್ಯಾಂಕ್ಗಳ ಸಾಲಿನಲ್ಲಿರುವ ಒಂದಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಎಸ್ಬಿಐ ಜನರಲ್ ಇನ್ಶುರೆನ್ಸ್ ಕಂ. ಕೆವಿಜಿಬಿ ಶಾಖೆಗಳ ಮೂಲಕ ಸಾಮಾನ್ಯ ವಿಮಾ ಉತ್ಪನ್ನ ಮಾರಾಟಕ್ಕೆ ಧಾರವಾಡ ಕಚೇರಿಯಲ್ಲಿ ಪರಸ್ಪರ ಒಡಂಬಡಿಕೆ ಮಾಡಿಕೊಂಡವು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕ ಬಿ.ಸಿ.ರವಿಚಂದ್ರ ಮತ್ತು ಎಸ್ಬಿಐ ಜನರಲ್ ಇನ್ಶುರೆನ್ಸ್ ಕಂ ಲಿಮಿಟೆಡ್ ಪರ ಮಹೇಂದ್ರ ತ್ರಿಪಾಠಿ, ಮುಖ್ಯ ಅನುಸರಣೆ ಕಾನೂನು ಅಧಿಕಾರಿ ಸoಲಗ್ನತೆಗೆ ಸಹಿ ಹಾಕಿ, ಪರಸ್ಪರ ಪತ್ರಗಳನ್ನು ವಿನಿಯಮ ಮಾಡಿಕೊಂಡರು.
ಒಪ್ಪಂದದ ವಿನಿಮಯದ ನಂತರ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿ ಕೃಷ್ಣ, ಸಾಮಾನ್ಯ ವಿಮಾ ಕ್ಷೇತ್ರದಲ್ಲಿರುವ ಭಾರಿ ಬೇಡಿಕೆ ಗಮನಿಸಿ ಬ್ಯಾಂಕ್ ಎಸ್ಬಿಐ ಜನರಲ್ ಇನ್ಶುರೆನ್ಸ್ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಯಿತೆoದು ತಿಳಿಸಿದರು.
ಗ್ರಾಹಕರ ವೈವಿಧ್ಯಮಯ ಹಣಕಾಸಿನ ಅಗತ್ಯತೆ ಪೂರೈಸಲು ಬ್ಯಾಂಕ್ ನಿರಂತರ ಶ್ರಮಿಸುತ್ತಿದೆ. ಅದೇ ದಿಕ್ಕಿನಲ್ಲಿ ಈ ಮೈತ್ರಿ ಇದೆ. ಗ್ರಾಹಕರು ವಿಮಾ ಸುರಕ್ಷತೆಗೆ ಅವರ ಆರೋಗ್ಯ, ಮನೆ, ಮೋಟಾರ್, ಆಸ್ತಿ ಇತ್ಯಾದಿ ಸ್ಪರ್ಧಾತ್ಮಕ ಪ್ರೀಮಿಯಮ್ ದರದಲ್ಲಿ ವಿಮಾ ವ್ಯಾಪ್ತಿಗೆ ಒಳಪಡಿಸಬಹುದು ಎಂದರು.
ಗ್ರಾಹಕರಿಗೆ ಒಗ್ಗಬಹುದಾದ, ಒಪ್ಪಬಹುದಾದ ಪಾಲಿಸಿ ಬಿಡುಗಡೆಗೆ ಕಂಪನಿಯ ಅಧಿಕಾರಿಗಳಿಗೆ ವಿನಂತಿಸಿ ಅವರು, ಬ್ಯಾಂಕ್ ಸಾಮಾನ್ಯ ಬ್ಯಾಂಕಿoಗ್ ವ್ಯವಹಾರದ ಹೊರತಾಗಿ, ಗ್ರಾಮೀಣ ಅಭಿವೃದ್ಧಿಗೆ ಮತ್ತು ಗ್ರಾಮೀಣ ಜನರ ಸಾಮಾಜಿಕ ಉನ್ನತಿಗೆ ಬದ್ಧವಾಗಿದೆ ಎಂದು ಹೇಳಿದರು.
ಇನ್ಶುರೆನ್ಸ್ ಕಂಪನಿಯ ಕ್ಲಸ್ಟರ್ ಸೇಲ್ಸ್ ಮ್ಯಾನೇಜರ್ ಸಲೀಂ ಮುಜಾವರ್, ಬ್ಯಾಂಕಿನ ಜನರಲ್ ಮ್ಯಾನೇಜರ್ ಚಂದ್ರಶೇಖರ ಮೊರೊ, ವ್ಯವಸ್ಥಾಪಕಿ ಎಸ್.ಎಎಸ್.ಮಣ್ಣೂರ ಇದ್ದರು.