ಧಾರವಾಡ: ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಮಲ್ಲಿಕಾರ್ಜುನ ಮನಸೂರ ಅವರ ೨೮ನೇ ಪುಣ್ಯಸ್ಮರಣೆ ನಿಮಿತ್ಯ ಶನಿವಾರ ಡಾ. ಮಲ್ಲಿಕಾರ್ಜುನ ಮನಸೂರ ಅವರ ಸಮಾಧಿಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿದರು.
ನಂತರ ಮಾತನಾಡಿದ ಶಿವಾನಂದ ಕರಾಳೆ, ಡಾ. ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯಸ್ಮರಣೆ ನಿಮಿತ್ಯ ಪ್ರತಿವರ್ಷ ಸಂಗೀತ ಕಚೇರಿ ಆಯೋಜಿಸುತ್ತಿತ್ತು. ಪ್ರಸಕ್ತ ಕೊರೋನಾ ಹಿನ್ನಲೆ ಮುಂದೂಡಿದೆ. ಕಾರ್ಯಕ್ರಮ ರದ್ದುಪಡಿಸಿ, ಅತ್ಯಂತ ಸರಳವಾಗಿ ಪೂಜೆ ಮಾಡಲಾಗಿದೆ ಎಂದರು.
ಬರುವ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಟ್ರಸ್ಟ್ ಸದಸ್ಯರ ಆಶಯದಂತೆ ಸಂಗೀತೋತ್ಸವ ನಡೆಸಲಿದೆ. ಡಾ. ಮನಸೂರವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಕನ್ನಡ-ಸಂಸ್ಕೃತಿ ಇಲಾಖೆಯು 1997ರಲ್ಲಿ ಟ್ರಸ್ಟ್ ರಚಿಸಿದೆ ಎಂದು ಹೇಳಿದರು.
ಅಲ್ಲದೇ, ಟ್ರಸ್ಟ್ ವತಿಯಿಂದ ಡಾ. ಮನಸೂರ ಅವರ ವಾಸಿಸಿದ ಮನೆಯನ್ನು ನವೀಕರಿಸಿರಿ ವಸ್ತುಸಂಗ್ರಹಾಲಯವನ್ನಾಗಿ ಮಾಡಿ ಈಗಾಗಲೇ ಹಿಂದೂಸ್ತಾನಿ ಸಂಗೀತವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಂಗೀತ ಶಾಲೆ ಪ್ರಾರಂಭಿಸಿದೆ ಎಂದರು.
ಉಪ ವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ, ಟ್ರಸ್ಟ್ ಸದ್ಯಸರಾದ ಪದ್ಮಶ್ರೀ ಡಾ. ಎಂ.ವೆoಕಟೇಶಕುಮಾರ್, ನೀಲಾ ಕೊಡ್ಲಿ, ಡಾ. ದಿಲೀಪ್ ದೇಶಪಾಂಡೆ, ಶಂಕರ ಕುಂಬಿ, ಪ್ರಕಾಶ ಬಾಳಿಕಾಯಿ, ಡಾ.ಚಂದ್ರಿಕಾ ಕಾಮತ್, ಚಂದ್ರಕಾoತ ಆಲೂರ, ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಂಜುಳಾ ಯಲಿಗಾರ ಇದ್ದರು.
ಧಾರವಾಡ: ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಮಲ್ಲಿಕಾರ್ಜುನ ಮನಸೂರ ಪುಣ್ಯಸ್ಮರಣೆ
- Advertisement -