Thursday, August 11, 2022

Latest Posts

ಧಾರವಾಡ| ಗುರುವಾರ ನಾಲ್ಕು ಮಂದಿಗೆ ಕೋವಿಡ್ ದೃಢ, ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ

ಧಾರವಾಡ: ಪೇಢಾ ನಗರಿ ಜಿಲ್ಲೆಯಲ್ಲಿ ಗುರುವಾರವೂ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ-7824 (56-ಪುರುಷ), ಇವರು ಹುಬ್ಬಳ್ಳಿ ಮಂಟೂರ ರಸ್ತೆಯ ಗುಂಜಾಳ ಪ್ಲಾಟ್ ನಿವಾಸಿ. ಪಿ-7825 (5-ಮಗು) ಇವರು ಹುಬ್ಬಳ್ಳಿ ನಗರದ ಪಿ.ಬಿ.ರಸ್ತೆಯ ಹೊಸ ಗಬ್ಬೂರ ನಿವಾಸಿ. ಪಿ-7827 (30-ಪುರುಷ), ಇವರು ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ, ಅಕ್ಷಯ ಪಾರ್ಕ್ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-7826 (28-ಪುರುಷ) ಹಳೆಹುಬ್ಬಳ್ಳಿ ಸದರಸೋಫಾ ಕೊಡಿಗೇರ ಪ್ಲಾಟ್ ನಿವಾಸಿ. ಗುಜರಾತ್‌ನಿಂದ ಹಿಂದಿರುಗಿದ್ದಾರೆ.
ಇಬ್ಬರು ಗುಣ-ಬಿಡುಗಡೆ: ಕೋವಿಡ್ ನಿಂದ ಗುಣಮುಖರಾಗಿರುವ ಎರಡು ವರ್ಷದ ಬಾಲಕಿ ಪಿ-5007 ಹಾಗೂ 26 ವರ್ಷದ ಮಹಿಳೆ ಪಿ-5971 ಕಿಮ್ಸ್ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೧೭೫ ಕ್ಕೆ ಏರಿಕೆಯಾಗಿದೆ. ಈಗಾಗಲೇ 54 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss