ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿತ್ಯವೂ ಹೆಚ್ಚುತ್ತಿದ್ದು, ಬುಧವಾರ ಕೂಡ ಎಂಟು ಕೋವಿಡ್-19 ಪ್ರಕರಣ ದೃಢಪಟ್ಟಿವೆ. ಇದು ಜನರಲ್ಲಿ ಆತಂಕ ಸೃಷ್ಠಿಸಿದೆ.
ಓರ್ವ ಸೋಂಕಿತ ವ್ಯಕ್ತಿಯಿಂದ ಇದೀಗ ಏಳು ಜನರ ಜೀವಕ್ಕೆ ಸಂಚಕಾರ ಬಂದಿದೆ. ನಾಲ್ಕು ವರ್ಷದ ಬಾಲಕ, ಐದು ಹಾಗೂ 10 ವರ್ಷದ ಬಾಲಕಿಯರಿಗೂ ಸೋಂಕು ತಗಲಿದ್ದು ಭೀತಿ ಹುಟ್ಟಿಸಿದೆ. ಅಲ್ಲದೇ, ಕೊರೋನಾ ಕ್ರಮೇಣ ಸಮುದಾಯಕ್ಕೆ ಹಬ್ಬುತ್ತಿರುವುದು ಸಾರ್ವಜನಿಕರಲ್ಲಿ ನಡುಕು ಹುಟ್ಟಿಸಿದೆ. ಇದಕ್ಕೆ ಬುಧವಾರ ಒಂದೇ ಓಣಿ ಏಳು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು ಸಾಕ್ಷಿ.
ಪಿ-7539 (59-ಪುರುಷ), ಪಿ-7540 (5-ಬಾಲಕಿ), ಪಿ-7541 (30-ಮಹಿಳೆ), ಪಿ-7542 (10-ಬಾಲಕಿ), ಪಿ-7543 (೪- ಬಾಲಕ), ಪಿ-7544 (34-ಪುರುಷ) ಪಿ-7545 (33-ಪುರುಷ) ಈ ಏಳು ಜನರು ಧಾರವಾಡ ಕಿಲ್ಲಾದ ಕಟ್ಟಿಚಾಳ ನಿವಾಸಿಗಳು. ಪಿ-6834 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-7538(55-ಪುರುಷ) ಇವರು ಮೊರಬ ಗ್ರಾಮದ ಜಾಡರಪೇಟೆ ನಿವಾಸಿ. ಪಿ-6222 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 171ಕ್ಕೆ ಏರಿಕೆಯಾಗಿದೆ. 51 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.