ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಕೊರೋನಾ ನಿತ್ಯವೂ ರಣಕೇಕೆ ಹಾಕುತ್ತಿದೆ. ಮನುಕುಲದ ಮೇಲೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಶುಕ್ರವಾರ ಒಂದೇ ಬರೋಬರಿ 19 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ತಲುಪಿದೆ.
ಸೋಂಕಿತರನ್ನು ಪಿ-6251(34-ಮಹಿಳೆ) ಮಹರಾಷ್ಟದಿಂದ ಹಿಂದಿರುಗಿದ ವ್ಯಕ್ತಿಯಾಗಿದ್ದಾರೆ. ಪಿ-6252 (72-ಮಹಿಳೆ) ತೀವ್ರ ಉಸಿರಾಟದ ತೊಂದಿರೆಯಿ0ದ ಬಳಲುತ್ತಿದ್ದು, ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟವ್ ದೃಢಪಟ್ಟಿದೆ. ಪಿ-6253(37-ಪುರುಷ) ಅಂತರ್ ಜಿಲ್ಲಾ ಪ್ರಯಾಣ(ಚಿತ್ರದುರ್ಗ) ಹಿನ್ನಲೆ ಹೊಂದಿದ್ದಾರೆ.
ಪಿ-6254(40-ಪುರುಷ), ಪಿ-6255(49-ಪುರುಷ), ಪಿ-6256(63-ಪುರುಷ) ಹಾಗೂ ಪಿ-6257(71-ಮಹಿಳೆ) ಇವರೆಲ್ಲ ತೀವ್ರ ಜ್ವರ, ನೆಗಡಿ, ಕೆಮ್ಮುನಿಂದ ಬಳಲುತ್ತಿದ್ದು, ಈ ನಾಲ್ಕು ಜನರನ್ನು ಕೂಡ ಕೋವಿಡ್-19 ತಪಾಸಣೆಗೆ ಒಳಪಡಿಸಿದಾಗ ಪಾಸಿಟಿವ್ ದೃಢಪಟ್ಟಿದೆ.
ಪಿ-6258(70-ಪುರುಷ) ಹಾಗೂ ಪಿ-6259(62-ಮಹಿಳೆ) ಮಹಾರಾಷ್ಟದಿಂದ ಹಿಂದಿರುಗಿದ ವ್ಯಕ್ತಿಗಳಾಗಿದ್ದಾರೆ. ಪಿ-6260(34-ಪುರುಷ) ಇವರು ಪಿ-5970ರ ಸೋಂಕಿತರ ಸಂಪರ್ಕ ಹೊಂದಿದ್ದರೆ, ಪಿ-6261(6 ತಿಂಗಳ ಗಂಡು ಮಗು) ಪಿ-5969ರ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ.
ಪಿ-6262 (50-ಪುರುಷ) ಕೋಲಾರ್-ಬೆಂಗಳೂರು ಅಂತರ್ ಜಿಲ್ಲಾ ಪ್ರಯಾಣ ಹಿನ್ನಲೆ ಹೊಂದಿದ್ದಾರೆ. ಪಿ-6263(46-ಪುರುಷ) ತಮಿಳುನಾಡಿನ ಹಿನ್ನಲೆ ಹೊಂದಿದ್ದರೆ, ಪಿ-6264(33-ಮಹಿಳೆ), ಪಿ-6265(12-ಬಾಲಕಿ) ಹಾಗೂ ಪಿ-6266(33-ಪುರುಷ) ಮಹಾರಾಷ್ಟ ರಾಜ್ಯದಿಂದ ಹಿಂದಿರುಗಿದ ವ್ಯಕ್ತಿಗಳಾಗಿದ್ದಾರೆ.
ಪಿ-6267(77-ಮಹಿಳೆ) ತುಮಕೂರು ಜಿಲ್ಲೆ ಪ್ರಯಾಣ ಹಿನ್ನಲೆ ಹೊಂದಿದ್ದರೆ, ಪಿ-6268(35-ಪುರುಷ) ಗುಜರಾತ್ ರಾಜ್ಯದಿಂದ ಹಿಂದಿರುಗಿದ ವ್ಯಕ್ತಿ. ಅದರಂತೆ ಪಿ-6269(28-ಪುರುಷ) ಗೋವಾ ರಾಜ್ಯದಿಂದ ಹಿಂದಿರುಗಿದ ವ್ಯಕ್ತಿಯಾಗಿದ್ದಾರೆ. ಇವರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಾರ್ಯ ನಡೆಯುತ್ತಿದೆ.
ಈಗಾಗಲೇ ಈ ಮಹಾಮಾರಿಗೆ ಓರ್ವ ವ್ಯಕ್ತಿ ಬಲಿ ಪಡೆದಿದೆ. ಅಣ್ಣಿಗೇರಿ, ಮೊರಬ ಹಾಗೂ ಉಪ್ಪಿನಬೆಟಗೇರಿ ಸೇರಿದಂತೆ ಕ್ರಮೇಣವಾಗಿ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಮಹಾಮಾರಿ ಸೋಂಕಿತರ ಸಂಖ್ಯೆಯಿ0ದ ಪೇಢಾ ನಗರಿ ಜಿಲ್ಲೆ ಜನತೆಯಲ್ಲಿ ಇನ್ನಷ್ಟು ಆತಂಕ ಮನೆ ಮಾಡಿದೆ.
ಜಿಲ್ಲೆಯಲ್ಲಿ ಹತೋಟಿಯಲ್ಲಿದ್ದ ಕೊರೋನಾ ಹಾವಳಿ ಲಾಕ್ಡೌನ್ ಸಡಲಿಕೆಯಿಂದ ಅಂತರ್ ಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಬಂದ ಜನರಿಂದ ಪ್ರಕರಣ ಸಂಖ್ಯೆ ಹೆಚ್ಚುತ್ತಿವೆ. ಈವರೆಗೆ 46 ಜನರ ಸೋಂಕಿನಿ0ದ ಗುಣಮುಖವಾಗಿ ಬಿಡುಗಡೆ ಹೊಂದಿದ್ದು, ಉಳಿದ 44 ಸೋಂಕಿತರಿಗೆ ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.