Thursday, July 7, 2022

Latest Posts

ಧಾರವಾಡ ಜಿಲ್ಲೆಯಲ್ಲಿ 245 ಜನರ ವರದಿ ನೆಗಟಿವ್: 1 ಪಾಸಿಟಿವ್

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಗುರುವಾರದ ಅಂತ್ಯಕ್ಕೆ 267 ಜನರಿಂದ ಮಾದರಿ ಸಂಗ್ರಹಿಸಿದ್ದು, ಈ ಪೈಕಿ ಒಬ್ಬರಲ್ಲಿ ಸೋಂಕು ಮತ್ತೆ ದೃಢಪಟ್ಟಿದ್ದು, 245 ಜನರ ವರದಿ ನೆಗಟಿವ್ ಬಂದಿದೆ.

ಉಳಿದ 21 ಜನರ ವರದಿ ಬರಬೇಕಿದೆ. ಈವರೆಗೆ 772 ಜನರ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ. ಈ ಪೈಕಿ 137 ಜನ ಮನೆಯಲ್ಲೇ 14 ದಿನಗಳ ಪ್ರತ್ಯೇಕ ವಾಸವಾಗಿದ್ದಾರೆ. ಸೋಂಕು ಲಕ್ಷಣವುಳ್ಳ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ 299 ಜನ 14 ದಿನಗಳ ಪ್ರತ್ಯೇಕ ವಾಸ ಮುಗಿಸಿದ್ದಾರೆ. 331 ಜನ 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss