Wednesday, August 10, 2022

Latest Posts

ಧಾರವಾಡ ಜಿಲ್ಲೆಯಲ್ಲಿ 255 ಜನರಲ್ಲಿ ಸೋಂಕು ಪತ್ತೆ, 135 ಜನ ಸೋಂಕಿoದ ಗುಣಮುಖ

 ಧಾರವಾಡ: ಜಿಲ್ಲೆಯಲ್ಲಿ ನಿತ್ಯವೂ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಿದೆ. ಬುಧವಾರ ಈ ಸೋಂಕಿಗೆ ತುತ್ತಾದ ಎಂಟು ಜನ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 289ಕ್ಕೆ ಏರಿದೆ.
ಮೃತರು ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಇತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.
255 ಜನರಲ್ಲಿ ಹೊಸದಾಗಿ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ (9,925) 10 ಸಾವಿರ ಗಡಿ ಸಮೀಪಸಿದೆ.
135 ಜನ ಸೋಂಕಿoದ ಗುಣವಾಗಿದ್ದು, ಈವರೆಗೆ 7,106 ಜನ ಕಾಯಿಲೆ ಮುಕ್ತರಾಗಿದ್ದಾರೆ. ಜಿಲ್ಲೆಯ 2,530 ಸಕ್ರಿಯ ಪ್ರಕರಣಗಳಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss