Saturday, July 2, 2022

Latest Posts

ಧಾರವಾಡ ಜಿಲ್ಲೆಯಲ್ಲಿ 279 ಜನರಲ್ಲಿ ಕೊರೋನಾ ಸೋಂಕು ದೃಢ, 351 ಮಂದಿ ಗುಣಮುಖ , 10 ಬಲಿ

ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಮನುಕುಲದ ಅಟ್ಟಹಾಸ ಮೆರೆಯುತ್ತಿದೆ. ನಿತ್ಯವೂ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವಾರ ಈ ಸೋಂಕಿಗೆ ತುತ್ತಾದ 10 ಜನ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 249ಕ್ಕೆ ಏರಿದೆ. ಮೃತರು ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಇತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚಿದಂತೆ ಗುಣಮುಖ ಸಂಖ್ಯೆಯೂ ಹೆಚ್ಚಿದೆ.
279 ಜನರಲ್ಲಿ ಹೊಸದಾಗಿ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಬರೋಬ್ಬರಿಗೆ ಎಂಟು ಸಾವಿರ(8,134) ಗಡಿ ದಾಟಿದೆ. 351 ಜನ ಸೋಂಕಿoದ ಗುಣವಾಗಿದ್ದು, ಈವರೆಗೆ 5,365 ಜನ ಕಾಯಿಲೆ ಮುಕ್ತರಾಗಿದ್ದಾರೆ. ಜಿಲ್ಲೆಯ 2,520 ಸಕ್ರಿಯ ಪ್ರಕರಣಗಳಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss