Thursday, August 11, 2022

Latest Posts

ಧಾರವಾಡ ಜಿಲ್ಲೆಯಲ್ಲಿ145 ಜನರಲ್ಲಿ ಸೋಂಕು ದೃಢ , 236 ಜನ ಗುಣಮುಖ

ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಿದೆ. ಭಾನುವಾರ ಈ ಸೋಂಕಿನಿoದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಈ ಮೂಲಕ ಮೃತರ ಸಂಖ್ಯೆ 482ಕ್ಕೆ ಏರಿದೆ.
ಮೃತರು ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಇತರ ಲಕ್ಷಣಗಳನ್ನು ಹೊಂದಿದ್ದರು. 145 ಜನರಲ್ಲಿ ಹೊಸದಾಗಿ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17,201ಕ್ಕೆ ಏರಿದೆ. 236 ಜನ ಸೋಂಕಿoದ ಗುಣವಾಗಿದ್ದು, ಈವರೆಗೆ 14,254 ಜನ ಕಾಯಿಲೆ ಮುಕ್ತರಾಗಿದ್ದಾರೆ. ಜಿಲ್ಲೆಯ 2,465ಸಕ್ರಿಯ ಪ್ರಕರಣಗಳಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss