ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿoದ ಮೃತರ ಸಂಖ್ಯೆ ನಿತ್ಯವೂ ಹೆಚ್ಚುತ್ತಿದೆ. ಸೋಮವಾರವೂ ಎಂಟು ಜನ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 155ಕ್ಕೆ ಏರಿಕೆ ಕಂಡಿದೆ.
ಮೃತರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಇತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.
ಹೊಸದಾಗಿ 191 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,647 ಏರಿದೆ. 88 ಜನ ಸೋಂಕಿoದ ಗುಣವಾಗಿದ್ದು, ಈವರೆಗೆ 1,934 ಜನ ಕಾಯಿಲೆ ಮುಕ್ತರಾಗಿದ್ದಾರೆ. ಜಿಲ್ಲೆಯ 2,558 ಸಕ್ರಿಯ ಪ್ರಕರಣಗಳಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡುತ್ತಿದೆ.