Monday, July 4, 2022

Latest Posts

 ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ: ನೆರೆ ಹಾವಳಿ ಭೀತಿ

ಧಾರವಾಡ: ವಿದ್ಯಾಕಾಶಿ ಹಾಗೂ ಸಾಂಸ್ಕೃತಿಕ ನಗರಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಧಾರವಾಡ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಪೇಢಾ ನಗರಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಒoದಡೆ ಕೊರೋನಾ ಹಾವಳಿಯಿಂದ ಲಾಕ್‌ಡೌನ್‌ನಿಂದ ಕಂಗೆಟ್ಟ ಜನತೆಗೆ ಇದೀಗ ಕಳೆದ ಮೂರು ದಿನಗಳಿಂದ ಹಗಲು ರಾತ್ರಿ ಬಿಟ್ಟುಬಿಡದೇ ಮನಸೋ ಇಚ್ಛೆ ಸುರಿಯುವ ವರುಣ ದೇವನ ಆರ್ಭಟದಿಂದ ನಗರ ಹಾಗೂ ಗ್ರಾಮೀಣ ಜನರನ್ನು ದಂಗಾಗಿಸಿದೆ.
ಮಳೆಯಿಂದ ಲಕ್ಷ್ಮಿಸಿಂಗನ ಕೇರಿ, ಮಾಳಮಡ್ಡಿ, ಜನ್ನತನಗರ, ಶ್ರೀನಿಗರ, ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ. ವರುಣನ ರೌದ್ರ ನರ್ತನಕ್ಕೆ ಟೋಲ್‌ನಾಕ್ ಅಕ್ಷರಶಃ ನಡುಗಡೆಯಾಗಿದೆ. ಚರಂಡಿ ನೀರು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ಅಡಚನೆಯಾಯಿತು.
ಜಿಲ್ಲೆಯಾದ್ಯಂತ ಸರಿಯುವ ಮಳೆಯಿಂದಾಗಿ ಜಿಲ್ಲೆಯಲ್ಲಿನ ಬೆಣ್ಣೆಹಳ್ಳ-ತುಪ್ಪರಿಹಳ್ಳಿ ಹಾಗೂ ಕರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿವೆ. ಈಗಾಗಲೇ ಹಳ್ಳದ ನೀರಿಗೆ ಸಿಲುಕಿ ರೈತನೋರ್ವ ಕೊಚ್ಚಿಹೋದ ಘಟನೆ ನಡೆದಿದ್ದು, ಶವ ಮಾತ್ರ ಈವರೆಗೆ ಪತ್ತೆಯಾಗಿಲ್ಲ.
ಒಂದಡೆ ಮೂರು ದಿನಗಳಿಂದ ಎಡಬಿಡದೆ ಸುರಿಯುವ ಮಳೆ ಕಂಗಾಲದ ರೈತ ವಲಯ, ಭೂಮಿಯಲ್ಲಿ ಹಸಿ ಹೆಚ್ಚಾಗಿ ಬೆಳೆಗಳಿಗೆ ರೋಗ ತಗಲುವ ಭಯದಲ್ಲಿದ್ದಾರೆ. ಇನ್ನೊಂದ ಕೊರೋನಾ ಹಾವಳಿ ನಡೆವೆಯೇ ಇದೀಗ ನೆರೆ ಹಾವಳಿ ಭೀತಿ ಎದುರಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss