Wednesday, August 10, 2022

Latest Posts

 ಧಾರವಾಡ ಜಿಲ್ಲೆಯಾದ್ಯಂತ 193 ಜನರಲ್ಲಿ ಸೋಂಕು ದೃಢ, 55 ಜನರು ಗುಣಮುಖ

ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆಯಾದ್ಯಂತ ಕೊರೋನಾ ಸೋಂಕು ನಿತ್ಯವೂ ತನ್ನ ಮರಣ ಮೃದಂಗ ಭಾರಿಸುತ್ತಿದೆ. ಈ ಕಾಯಿಲೆಗೆ ಸೋಮವಾರವೂ ಎಂಟು ಜನರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 103) ಶತಕ ದಾಟಿದೆ.
ಧಾರವಾಡ ಮರಾಠ ಕಾಲೋನಿಯ 82 ವರ್ಷದ(ಪಿ-86422) ವ್ಯಕ್ತಿ, ಧಾರವಾಡ ಟೋಲ್ ನಾಕಾದ 55 ವರ್ಷದ(ಪಿ-76894) ವ್ಯಕ್ತಿ, ಹಳೇ ಹುಬ್ಬಳ್ಳಿಯ ಅಯೋಧ್ಯ ನಗರದ 51 ವರ್ಷದ(ಪಿ-91096) ವ್ಯಕ್ತಿ, ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದ 60 ವರ್ಷದ (ಪಿ-77293) ವ್ಯಕ್ತಿ ಮೃತಪಟ್ಟಿದ್ದಾರೆ.
ಅದರಂತೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ 75 ವರ್ಷದ (ಪಿ-68111) ವ್ಯಕ್ತಿ, ಹುಬ್ಬಳ್ಳಿಯ ಸಿಬಿಟಿ ಮಖಾಂದರ್ ಗಲ್ಲಿಯ 48 ವರ್ಷದ (ಪಿ-76970) ವ್ಯಕ್ತಿ, ಕರಡಿಗುಡ್ಡ ಗ್ರಾಮದ 72 ವರ್ಷದ (ಪಿ-65342) ವ್ಯಕ್ತಿ, ಹುಬ್ಬಳ್ಳಿಯ ಕೌಲಪೇಟ, ಮೋಮಿನ್ ಪ್ಲಾಟ್‌ದ 53 ವರ್ಷದ(ಪಿ-55303) ಮಹಿಳೆ ಬಲಿಯಾಗಿದ್ದಾರೆ.
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ ,ಎದೆ ನೋವು ಇತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಹೊಸದಾಗಿ 193 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,383ಕ್ಕೆ ಏರಿದೆ.
55 ಜನರು ಈ ಸೋಂಕಿನಿoದ ಗುಣಮುಖರಾಗಿದ್ದು, ಈವರೆಗೆ 1,277 ಜನ ಕಾಯಿಲೆ ಮುಕ್ತರಾಗಿದ್ದಾರೆ. ಜಿಲ್ಲೆಯ 2003 ಸಕ್ರಿಯ ಪ್ರಕರಣಗಳಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss