ಧಾರವಾಡ: ಇಲ್ಲಿನ ಜ್ಯುಬ್ಲಿ ವೃತ್ತದಲ್ಲಿ ನೂತನವಾಗಿ ಆರಂಭಗೊಂಡ ಡಾ. ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆಗೆ ಉದ್ಯಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಲೋಕಾಪರ್ಣೆಗೊಳಿಸಿದರು.
ಈ ವೇಳೆ ಮಾತನಾಡಿದ ಡಾ. ಸಂಕೇಶ್ವರ, ಮನುಷ್ಯ ಕೈ-ಕಾಲು ಕಳೆದುಕೊಂಡರೇ, ಜೀವನ ನಡೆಸಬಹುದು. ಆದರೆ, ಕಣ್ಣು ಇಲ್ಲವಾದರೆ, ಜೀವನವೇ ನಶ್ವರ. ಹೀಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ಅಂಧತ್ವದಿಂದ ಅನೇಕ ಜನ ನರಳುತ್ತಿದ್ದು, ಅವರಿಗೆ ಪ್ರತಿಯೊಬ್ಬರು ಮರಣದ ನಂತರ ನೇತ್ರದಾನ ಮಾಡುವ ಮೂಲಕ ಜಗತ್ತು ನೋಡುವ ಭಾಗ್ಯ ಕರುಣಿಸಬೇಕು ಎಂದು ಹೇಳಿದರು.
ಡಾ. ರವಿ. ನಾಡಗೇರ್, ಜನರಿಗೆ ಉತ್ತಮ ಸೇವೆ ಒದಗಿಸಲು ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆ ೧೫ನೇ ಶಾಖೆ ಧಾರವಾಡದಲ್ಲಿ ಆರಂಭಗೊಂಡಿದೆ. ಸದ್ಬಳಿಕೆ ಮಾಡಿಕೊಳ್ಳಲು ಕರೆ ನೀಡಿದರು. ಈ ಸಂದರ್ಭದಲ್ಲಿ ಡಾ. ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆ ಸಮೂಹ ಸಂಸ್ಥೆ ಅಧ್ಯಕ್ಷ ಹರೀಶ ತ್ರಿವೇದಿ, ಡಾ. ಕೃಷ್ಣ ನಾಡಗೌಡ ಅನೇಕರು ಇದ್ದರು.