Tuesday, July 5, 2022

Latest Posts

ಧಾರವಾಡ: ನಿರಂತರ ಮಳೆಗೆ ವಿದ್ಯಾಕಾಶಿ ತತ್ತರ

ಧಾರವಾಡ: ಒಂದಡೆ ನಿತ್ಯವೂ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಹಾಗೂ ಸಾವಿನ ಪ್ರಮಾಣ. ಮತ್ತೊಂದಡೆ ಕೆಲ ದಿನಗಳಿಂದ ಬಿಡುವು ನೀಡಿದ ವರುಣ ದೇವ ಕಳೆದ ಎರಡು ದಿನಗಳಿಂದ ಹಗಲು-ರಾತ್ರಿ ಎಡಬಿಡದೆ ಸುರಿಯುತ್ತಿದ್ದಾನೆ. ಇದರಿಂದ ವಿದ್ಯಾಕಾಶಿ ಜನತೆಯ ಬದುಕು ತತ್ತರಗೊಂಡಿದೆ.

ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ವರುಣ ಆರ್ಭಟ ಜೋರಾಗಿದೆ. ಭೂಮಿಯಲ್ಲಿ ಹಸಿ ಹೆಚ್ಚಾಗಿ ಬೆಳೆಗಳು ಮೊಳೆಕೆ ಒಡೆಯುತ್ತಿವೆ.

ನಿತ್ಯವೂ ಸುರಿಯುವ ಮಳೆಯಿಂದ ಧಾರವಾಡದ ಟೋಲ್‌ನಾಕ್ ಅಕ್ಷರಶಃ ನಡುಗಡೆಯಾಗಿ ಸೃಷ್ಠಿಯಾಗಿದೆ. ಇದರಿಂದ ವಾಹನಗಳ ಸಂಚಾರದಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗುತ್ತಿದೆ. ಮಳೆಗೆ ಚರಂಡಿಗಳು ತುಂಬಿ ನೀರು ರಸ್ತೆಯ ಮೇಲೆ ಹರಿದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

ನಿರoತರ ಸುರಿಯುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆರಾಯ ಅಂಗಡಿಮು0ಗಟ್ಟು ತೆರೆಯಲು ಈ ಅವಕಾಶ ನೀಡುತ್ತಿಲ್ಲ. ಮಾಳಮಡ್ಡಿ, ಜನ್ನತನಗರ, ಶ್ರೀನಿಗರ, ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ.
ಜಿಲ್ಲೆಯ ಬಹುತೇಕ ಕರೆ-ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಕಲಘಟಗಿ ನೀರಸಾಗರ ಕೆರೆ, ಅಳ್ನಾವರ ಇಂದ್ರಮ್ಮನ ಕೆರೆ, ಬೆಣ್ಣೆಹಳ್ಳಿ-ತುಪ್ಪರಿಹಳ್ಳ, ಡೌರಿ ನಾಲಾ ಮಳೆಯಿಂದ ತುಂಬಿ ತುಳುಕುತ್ತಿವೆ. ಇದರಿಂದ ಕರೆ-ಕಟ್ಟೆ ಒಡೆದು ಪ್ರವಾಹ ಉಂಟಾಗುವ ಆತಂಕವನ್ನು ಜಿಲ್ಲೆಯಲ್ಲಿ ರೈತರು ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳಿಂದ ವರುಣ ದೇವನ ಕೃಪೆ ಜಿಲ್ಲೆಯಲ್ಲಿ ಹೆಚ್ಚಾಗಿ ಸಾರ್ವಜನಿಕರಲ್ಲಿ ಪುನಃ ನೆರೆ ಹಾವಳಿ ಹಾಗೂ ಪ್ರವಾಹದ ಭೀತಿ ಉಂಟಾಗಿದೆ. ಹೊಲಗಳಲ್ಲಿ ಕೋಯ್ಲಿಗೆ ಬಂದ ಗೆಜ್ಜೆ ಶೇಂಗಾ, ಹೆಸರು, ಸೋಯಾ ಅವರೆ ವರುಣನ ಪಾಲಾಗಿ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ.

ಕಳೆದ ವರ್ಷ ಉಂಟಾದ ಅತಿವೃಷ್ಟಿ ಹಾಗೂ ನೆರೆಹಾವಳಿ ತಂದಿಷ್ಟ ಸಂಕಷ್ಟದ ಕಹಿ ನೆನಪು ಮರೆಯುವ ಕೊರೋನಾ ಜನರ ಬದುಕು ಹೈರಾಣಾಗಿಸಿದೆ. ಈ ಹೊತ್ತಿನಲ್ಲಿ ಈಗ ಜಿಲ್ಲೆಯಲ್ಲಿ ಮೂರು ದಿನಗಳಿಂದ ಹಗಲು-ರಾತ್ರಿ ಬಿಟ್ಟುಬಿಡುದೆ ಸುರಿಯುವ ವರುಣ ದೇವನ ಆರ್ಭಟಕ್ಕೆ ಜನತೆ ಕಂಗಾಲಾಗಿದೆ.

ವರುಣನ ರೌದ್ರ ನರ್ತನಕ್ಕೆ ಶೈಕ್ಷಣಿಕ ನಗರಿ ಧಾರವಾಡ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ದೇವನ ಅಬ್ಬರಕ್ಕೆ ವಿದ್ಯಾಕಾಶಿ ಅಕ್ಷರಶಃ ನಲುಗಿದೆ. ಒಂದಡೆ ಕೊರೋನಾ ಭಯ, ಮತ್ತೊಂದಡೆ ನಿತ್ಯ ಸುರಿಯುವ ಮಳೆಯ ಕಾಟದಿಂದ ಸಾರ್ವಜನಿಕರು ಬೇಸತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss