ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ 74ನೇ ಸ್ವಾತಂತ್ರ್ಯ ದಿನಚಾರಣೆ ಬೃಹತ್- ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ಕೊರೋನಾ ಹಾವಳಿ ನಡೆವೆಯೂ ಕೇವಲ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಮಾಜಿಕ ಅಂತರದ ನಡೆವೆ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿದರು.ನಂತರ ಸಾರ್ವಜನಿಕರಿಗೆ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದ ಸಚಿವ ಜಗದೀಶ ಶೆಟ್ಟರ್, ಇಡೀ ಜಗತ್ತೇ ಕೊರೋನಾ ಹಾವಳಿ ನಡುವೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಆದ ವೈದ್ಯರು, ಪೌರ ಕಾರ್ಮಿಕರು, ಪೊಲೀಸ್ ಇಲಾಖೆಗೆ ಅಭಿನಂದಿಸಿದರು.ಬ್ರಿಟಿಷರ ದಾಸ್ಯತ್ವದಿಂದ ದೇಶದ ವಿಮೋಚನೆಗೆ ಸಾಕಷ್ಟು ಜನರು ತ್ಯಾಗ-ಬಲಿದಾನ ನಡೆದಿವೆ. ನಮ್ಮ ಹಿರಿಯರು ಗಳಿಸಿಕೊಟ್ಟಿ ಈ ಸ್ವಾತಂತ್ರ್ಯ ದಿನ ಉಳಿಸಿಕೊಂಡು ಹೋಗಬೇಕಿದೆ. ಈ ನೆಲದ ಹಿರಿಮೆ-ಗರಿಮೆ ಇನ್ನಷ್ಟು ಎತ್ತರಕ್ಕೆ ಒಯ್ಯಬೇಕಿದೆ ಎಂದು ಕರೆ ನೀಡಿದರು.