ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಧಾರವಾಡ| ಪದವೀಧರ ಚುನಾವಣಾ ಕರ್ತವ್ಯಲೋಪ; ಮೂವರು ಅಧಿಕಾರಿಗಳ ಅಮಾನತು: ಜಿಲ್ಲಾಧಿಕಾರಿ

ಧಾರವಾಡ: ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.೨೮ರಂದು ನಡೆದ ಚುನಾವಣೆಯಲ್ಲಿ ಕರ್ತವ್ಯಲೋಪ ಎಸಗಿದ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಮಹಾನಗರ ಪಾಲಿಕೆ ಶಿರಸ್ತೆದಾರ ವಿ.ಎಂ.ಸಾಳoಕೆ, ಧಾರವಾಡ ತಶೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕ ಜಿ.ಬಿ.ಚಂದನಕರ ಹಾಗೂ ಅಡವೇಶ ಪರ್ವತಿ ಅಮಾನತ್ತುಗೊಂಡ ಅಧಿಕಾರಿಗಳು.
ಈ ಮೂವರು ಅಧಿಕಾರಿಗಳು ಚುನಾವಣಾ ಸಾಮಗ್ರಿಗಳ ವಿತರಣೆ ಸಮರ್ಪಕವಾಗಿ ನಿರ್ವಹಿಸಿದೆ, ಕರ್ತವ್ಯಕ್ಕೆ ತೊಂದರೆ ಉಂಟು ಮಾಡಿದ ಹಿನ್ನಲೆ ಕಲಂ 134ರ ಉಲ್ಲಂಘಿಸಿದ್ದಕ್ಕೆ ವಿಚಾರಣೆ ಬಾಕಿ ಇರಿಸಿ ಅಮಾನತ್ತಗೊಳಿಸಿದೆ.
ಸದರಿ ನೌಕರರ ಅಮಾನತ್ತು ಅವಧಿಯಲ್ಲಿ ತಮ್ಮ ಕಾರ್ಯಾಲಯದ ಮುಖ್ಯಸ್ಥರ ಪರವಾನಿಗೆ ಇಲ್ಲದ ಕೇಂದ್ರ ಸ್ಥಾನ ಬಿಡುವಂತಿಲ್ಲ. ಸರ್ಕಾರದ ಜೀವನಾಂಶ ಪಡೆಯಲು ಮಾತ್ರ ಅರ್ಹರಿತ್ತಾರೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss