ಧಾರವಾಡ: ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಏಕಗವಾಕ್ಷಿ ಯೋಜನೆಯಡಿ ಲೇಖಕರ ಪುಸ್ತಕ ಖರೀದಿಸಿ ಅವುಗಳನ್ನು ಬೆಂಗಳೂರಿನಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸಲು ಆದೇಶಿಸುತ್ತ ಬಂದಿದ್ದು, ಪ್ರಸ್ತುತ ಕೋವಿಡ್-19 ಅವಾಂತರದಿoದ ಪುಸ್ತಕ ಸ್ವೀಕೃತಿ ಅವಧಿ 3 ತಿಂಗಳಕಾಲ ವಿಸ್ತರಿಸಬೇಕೆಂದು ಹಿರಿಯ ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಒತ್ತಾಯಿಸಿದ್ದಾರೆ.
ಕೊರೋನಾ ಭಯ, ಲಾಕ್ಡೌನ್ ಇತ್ಯಾದಿಗಳಿಂದ ಅನೇಕ ಲೇಖಕರಿಗೆ ಈ ರ್ಷ ಮರ್ಚ್ ಅಂತ್ಯದ ವೇಳೆಗೆ ಗ್ರಂಥ ಪೂರೈಸಲು ಸಾಧ್ಯವಾಗಿಲ್ಲ. ಸದ್ಯ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿದ್ದು, ಉತ್ತರ ರ್ನಾಟಕದ ದೂರದ ಪ್ರದೇಶಗಳ ಲೇಖಕರು ಗ್ರಂಥಗಳ ಬಂಡಲ್ ತೆಗೆದುಕೊಂಡು ಬೆಂಗಳೂರಿಗೆ ಹೋಗುವುದು ತುಸು ಕಷ್ಟಕರ ಎಂದಿದ್ದಾರೆ.
ಕೆಲ ಲೇಖಕರು ಗ್ರಂಥಗಳನ್ನು ತೆಗೆದುಕೊಂಡು ಹೋದರೂ, ಅಲ್ಲಿನ ಪರಿಸ್ಥಿತಿಯಿಂದ ಅವುಗಳನ್ನು ಒಪ್ಪಿಸಲಾಗದೆ ಮರಳಿ ಬಂದ ಉದಾಹರಣೆಗಳಿವೆ. ರಾಜ್ಯದ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅವರು, ಗ್ರಂಥಗಳ ಸ್ವೀಕೃತಿ ಕನಿಷ್ಠ 2-3 ತಿಂಗಳು ಅವಧಿ ವಿಸ್ತರಿಸಬೇಕೆಂದು ಡಾ.ಸವದತ್ತಿಮಠ ಆಗ್ರಹಸಿದ್ದಾರೆ.