Sunday, August 14, 2022

Latest Posts

ಧಾರವಾಡ| ಬಸವರಾಜ ಹೊರಟ್ಟಿ ಶಿಕ್ಷಕರ ಆಶಾಕಿರಣ

ಧಾರವಾಡ: ಸಜ್ಜನ ರಾಜಕಾರಣಕ್ಕೆ ಹೆಸಾರದ ಬಸವರಾಜ ಹೊರಟ್ಟಿ ಅವರು, ಸಹಾಯ ಕೇಳಿ ಬಂದವರಿಗೆ ತುರ್ತಾಗಿ ಸ್ಪಂದಿಸುವ ನೇರ ನಡೆ-ನುಡಿಯ ವ್ಯಕ್ತಿಗಳು. ಮುಖ್ಯವಾಗಿ ಶಿಕ್ಷಕರ ಪಾಲಿನ ಆಶಾಕಿರಣ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಅಭಿಪ್ರಾಯಪಟ್ಟರು.

ರಾಜ್ಯ ಗಣಿತ ಪರಿಷತ್ ಧಾರವಾಡ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಡೆದ “ಸಂಖ್ಯಾ ಲೋಕದಲ್ಲಿ ಒಂದು ಸುತ್ತು” ಎಂಬ ವಿಚಾರ ಸಂಕಿರಣದಲ್ಲಿ ಬಸವರಾಜ ಹೊರಟ್ಟಿ ರಾಜಕೀಯದಲ್ಲಿ 40 ವಸಂತ ಪೂರೈಸಿದ ನೆನಪಿಗೋಸ್ಕರ ಕೆಸಿಡಿಯಿಂದ ಸನ್ಮಾನಿಸಿ ಮಾತನಾಡಿದರು.

ನಾಲ್ಕು ದಶಕಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಕರ ಪ್ರತಿನಿಧಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರಿಗೆ ದೇವರು ನೂರಾರು ವರ್ಷ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ. ಶಿಕ್ಷಕರ ಪರವಾಗಿ ಇನ್ನಷ್ಟು ಕೆಲಸ ಮಾಡುವ ಶಕ್ತಿ ನೀಡಲೆಂದು ಶುಭ ಹಾರೈಸಿದರು.

ಸನ್ಮಾನಕ್ಕೆ ಪ್ರತಿಯಿಸಿದ ವಿಪ ಸದಸ್ಯ ಬಸವರಾಜ ಹೊರಟ್ಟಿ, ಜೀವನ-ಸಾಧನೆ, ಹಲವು ಅನುಭವ ಹಂಚಿಕೊoಡು, ಕೆಸಿಡಿ ಕಾಲೇಜು ಪ್ರಾಧ್ಯಾಪಕರ ಸನ್ಮಾನಕ್ಕೆ ಕೃತಜ್ಞೆ ಸಲ್ಲಿಸಿದರಲ್ಲದೇ, ತಮ್ಮಿಂದ ಕಾಲೇಜಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರೆ, ರಾಜ್ಯ ಸರ್ಕಾರದಿಂದ ಒದಗಿಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಚ್.ಬಿ.ವಾಲಿಕಾರ, ಡಾ.ಶರಣು ಮುಷ್ಠಿಗೇರಿ, ಸಿಂಡಿಕೇಟ್ ಸದಸ್ಯರು, ಹೊರಟ್ಟಿ ಅಭಿಮಾನಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss