ಧಾರವಾಡ| ಬೆಣ್ಣೆಹಳ್ಳ-ತುಪ್ಪರಿಹಳ್ಳಿ ಸರ್ವೇ ಆರಂಭ, ತುಪ್ಪರಿಹಳ್ಳ ನೀರಾವರಿಗೆ ರೂ.500 ಕೋಟಿಗೆ ಮನವಿ: ಸಚಿವ ಶೆಟ್ಟರ್

0
13

ಧಾರವಾಡ: ಬೆಣ್ಣೆಹಳ್ಳ-ತುಪ್ಪರಿಹಳ್ಳ ಧಾರವಾಡ ಜಿಲ್ಲೆಯಲ್ಲಿ ಪ್ರಮುಖ ಹಳ್ಳಗಳು. ತುಪ್ಪರಿಹಳ್ಳ ಧಾರವಾಡ-ನವಲಗುಂದ ತಾಲೂಕಿನ ಅನೇಕ ಹಳ್ಳಿಗಳ ರೈತರಿಗೆ ಜೀವನಾಡಿಯಾಗಿದೆ. ಇದಕ್ಕೆ ನೀರಾವರಿ ಯೋಜನೆ ಅನುಷ್ಠಾನಿಸುತ್ತಿದೆ. ಬೇಕಾದ ಸುಮಾರು ರೂ.400-500 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸೋಮವಾರ ಶಿರೂರ ಗ್ರಾಮದಲ್ಲಿ ತುಪ್ಪರಿಹಳ್ಳದ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಭಯ ಹಳ್ಳಗಳು ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದು ಸಾಕಷ್ಟು ಜನರ ಆಸ್ತಿ-ಪಾಸ್ತಿ, ರೈತರ ಬೆಲೆ ನಾಶ ಮಾಡಿದೆ. ಕೋಟ್ಯಾಂತರ ರೂಪಾಯಿ ಪರಿಹಾರ ನೀಡಿದೆ. ಶಾಸ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆ ಅನುಷ್ಠಾನಿಸಿದೆ ಎಂದರು.
ಈ ಹಿಂದೆ ತಾವು ಸ್ಪೀಕರ್ ಇದ್ದ ಸಂದರ್ಭದಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ತುಪ್ಪರಿಹಳ್ಳ ಸಣ್ಣ ನೀರವಾರಿ ಬದಲಿಗೆ ಬೃಹತ್ ನೀರವಾರಿ ಯೋಜನೆಗೆ ಸೇರ್ಪಡಿಸಲು ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಬೊಮ್ಮಾಯಿ ಅವರು ಬೃಹತ್ ನೀರವಾರಿ ಯೋಜನೆಗೆ ಸೇರ್ಪಡಿಸಿದ್ದರು ಎಂದು ಮಾಹಿತಿ ನೀಡಿದರು.
ನೀರಾವರಿ ತಜ್ಞ ಪರಮಶೀವಯ್ಯ ವರದಿ ಅನುಸಾರ ಪ್ರಸ್ತುತ ಬೆಣ್ಣೆಹಳ್ಳ-ತುಪ್ಪರಿಹಳ್ಳ ನೀರಾವರಿ ಯೋಜನೆಗೆ ಒಳಪಡಿಸಿದೆ. ಪ್ರಸ್ತುತ ದ್ರೋಣ ಕ್ಯಾಮೆರಾ ಮೂಲಕ ಉಭಯ ಹಳ್ಳಗಳ ಸರ್ವೇ ಕಾರ್ಯ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅಕ್ಟೋಬರ್‌ನಲ್ಲಿ ಯೋಜನಾ ವರದಿ ಸಿದ್ಧಗೊಳ್ಳಲಿದೆ. ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಿಗೆ ಮನವಿ ಮಾಡಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here