Sunday, July 3, 2022

Latest Posts

ಧಾರವಾಡ| ಬೈಪಾಸ್ ಅಗಲೀಕರಣಕ್ಕೆ ಒತ್ತಾಯಿಸಿ ಪಾದಯಾತ್ರೆ: ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ

ಹೊಸದಿಗಂತ ವರದಿ, ಧಾರವಾಡ:

ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಹುಬ್ಬಳ್ಳಿ ಗಬ್ಬೂರ ಕ್ರಾಸ್‌ನಿಂದ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್‌ವರೆಗೆ ಬರುವ ಬೈಪಾಸ್‌ಗಳ ರಸ್ತೆ ಅಗಲೀಕರಣ, ತಾಂತ್ರಿಕ ನಿರ್ಮಾಣ, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ವಕೀಲ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಸೋಮವಾರ ಪಾದಯಾತ್ರೆ ನಡೆಯಿತು.

ನರೇಂದ್ರ ಟೋಲ್‌ನಿಂದ ಆರಂಭಗೊoಡ ಪಾದಯಾತ್ರೆಗೆ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಕೆಲಗೇರಿ ಗ್ರಾಮಸ್ಥರು, ಲಾರಿ ಮಾಲೀಕರ ಸಂಘ, ಜನಜಾಗೃತಿ ಸಂಘ ಸೇರಿದಂತೆ ಹಲವರು ಸ್ವಯಂ ಪ್ರೇರಿತವಾಗಿ ಪಕ್ಷಾತೀತವಾಗಿ ಬೆಂಬಲಿಸಿ, ಸಾಥ್ ನೀಡಿದರು.

ಕೇಂದ್ರ-ರಾಜ್ಯ ಸರ್ಕಾರಗಳ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ವಿರುದ್ಧು ಘೋಷಣೆ ಕೂಗಿದರಲ್ಲದೇ, ಕಳೆದ 20 ವರ್ಷಗಳಲ್ಲಿ ಬೈಪಾಸ್ ರಸ್ತೆ ಅಪಘಾತದಲ್ಲಿ ಸುಮಾರು 1,200 ಅಧಿಕ ಅಮಾಯಕ ಜನರು ಪ್ರಾಣ ತೆತ್ತಿದ್ದಾರೆ. ತಕ್ಷಣವೇ ಷಟ್ಪಥ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದರು.

ವಕೀಲ ಪಿ.ಎಚ್.ನೀರಲಕೇರಿ, ದೇಶದ ಪ್ರಮುಖ ನಗರಕ್ಕೆ ಸಂಪರ್ಕ ಕಲ್ಪಿಸುವ ಹು-ಧಾ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿದ ಉಳಿದ ಬೈಪಾಸ್ ಅಗಲೀಕರಣಗೊಂಡಿವೆ. ಆದರೆ, ಇದು ಮಾತ್ರ ಎರಡು ದಶಕಗಳು ಕಳೆದರೂ ಈಡೇರಿಲ್ಲ. ಇದು ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.

ರಾಜ್ಯ-ರಾಷ್ಟಿçಯ ಹೆದ್ದಾರಿ ಅಭಿವೃದ್ಧಿ, ಬೈಪಾಸ್ ಅಗಲೀಕರಣ, ನಿರ್ಮಾಣ, ನಿರ್ವಹಣೆ, ಸರ್ವೀಸ್ ರೋಡ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸುವ ರಸ್ತೆ ನಿರ್ಮಾಣ ಸಂಸ್ಥೆಯ ಗುತ್ತಿಗೆದಾರ ಅಶೋಕ ಖೇಣಿ ವಿರುದ್ಧ ರಾಜ್ಯ-ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗುವoತೆ ಒತ್ತಾಯ ಮಾಡಿದರು.

ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಅಶೋಕ ಖೇಣಿ ಹು-ಧಾ 26 ಕಿ.ಮೀ ಬೈಪಾಸ್ ನಿರ್ವಹಣೆ ಹೆಸರಲ್ಲಿ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ಅವರಿಗೆ ಟೋಲ್ ಸಂಗ್ರಹ ಮಾಡಲು ಬಿಡಬಾರದು. ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭೀಮಪ್ಪ ಕಸಾಯಿ, ಕೆ.ಎಸ್.ಭೀಮಣ್ಣವರ, ಬಸವರಾಜ ಕೊರವರ, ಉಳವಪ್ಪ ಒಡೆಯರ್, ಪ್ರಕಾಶ ಕಾಡ್ಲಿಗೇರಿ, ಕಾಂಗ್ರೆಸ್ ಮುಖಂಡ ಶಾಕೀರ ಸನದಿ, ಜಗದೀಶ ಅಣ್ಣಿಗೇರಿ, ಶ್ರೀಶೈಲ ಕಮತರ, ರುದ್ರಗೌಡ ಪಾಟೀಲ, ಮಂಜುನಾಥ ಹಿರೇಮಠ, ಗೈಬುಸಾಬ ಹೊನ್ನಾಳ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss