ಧಾರವಾಡ: ಕೊರೋನಾ ಹತೋಟಿಗೆ ಮೊದಲು ಗಣೇಶ ಉತ್ಸವಕ್ಕೆ ನಿರ್ಬಂಧ ಹೇರಿದ ಸರ್ಕಾರ ಉತ್ಸವ ಮಂಡಳಿಗಳ ಒತ್ತಾಯಕ್ಕೆ ಮಣಿದು ಕೆಲ ಷರತ್ತಗಳ ಮೂಲಕ ಆಚರಣೆಗೆ ಅನಮತಿ ನೀಡಿದೆ. ಗಣೇಶ ಉತ್ಸವ ಆಚರಣೆಗೆ ದಿನಗಣನೆ ಉಳಿದ್ದು, ಶುಕ್ರವಾರ ಶೈಕ್ಷಣಿಕ ನಗರಿಯಲ್ಲಿ ಭರ್ಜರಿ ತಯಾರಿ ನಡೆದಿದೆ.
ಕೊರೋನಾ ಹಿನ್ನಲೆ ಈ ಭಾರಿ ಸುಭಾಷ ರಸ್ತೆ, ಸೂಪ್ಪರ ಮಾರುಕಟ್ಟೆ ರಸ್ತೆ, ಮಾಳಮಡ್ಡಿ, ಗೌಳಿಗಲ್ಲಿ, ಮರಾಠ ಕಾಲೋನಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅಸ್ತು ಎಂದಿದ್ದು, ಉತ್ಸವ ಮಂಡಳಿಗಳಿoದ ಕೊರೋನಾ ಹತೋಟಿಗೆ ಸರ್ಕಾರಿ ನಿಮಯ ಪಾಲನೆ ಕಡ್ಡಾಯವಾಗಿದೆ.
ಪರಿಸರಕ್ಕೆ ಹಾನಿಕಾರಕ ಪಿಓಪಿ ಗಣೇಶ ಮೂರ್ತಿ ನಿಷೇಧಿಸಿದ್ದರಿಂದ ಇಲ್ಲಿನ ಕೆಲಗೇರಿ ಕಲಾವಿದ ಮಂಜುನಾಥ ಹಿರೇಮಠ ಸೇರಿದಂತೆ ವಿವಿಧಡೆ ಮಣ್ಣಿನಲ್ಲಿ ತಯಾರಿಸಿದ ಗಣೇಶ ಮೂರ್ತಿಗಳು ಹೆಚ್ಚು ಮಾರಾಟವಾಗಿವೆ. ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಮೂಲಕ ಹಬ್ಬ ಆಚರಿಸಬೇಕಿದೆ.
ಗೌರಿ ಗಣೇಶನ ಆಗಮನಕ್ಕೆ ಶುಕ್ರವಾರ ಇಲ್ಲಿನ ಸೂಪ್ಪರ ಮಾರುಕಟ್ಟೆ, ಸುಭಾಷ ರಸ್ತೆಯ ಮಳಿಗಳಲ್ಲಿ ಜನಜಂಗಳು ತುಂಬಿತ್ತು. ಈ ಹಬ್ಬದ ಖರೀದಿಗೆ ಬೇಕಾದ ಹೂವು-ಹಣ್ಣು, ತಕಾರಕಾರಿ, ಅಲಂಕಾರಿಕ ವಸ್ತುಗಳು, ಬಾಳೆ ದಿಂಡು ಇತ್ಯಾದಿ ಸಾಮಾಗ್ರಿ ಖರೀದಿಯೂ ಜೋರಾಗಿಯೇ ನಡೆದಿತ್ತು.
ಸೇಬಿನ ಬೆಲೆ ಪ್ರತಿ ಕೆಜಿಗೆ ರೂ.180, ಸೀಬೆ, ಮೂಸಂಬಿ, ದಾಳಿಂಬೆಯ ಬೆಲೆ ಕೆಜಿಗೆ ರೂ.170 ದಾಟಿದೆ. ಬಾಳೆ ಹಣ್ಣಿನ ಬೆಲೆಯೂ ಹೆಚ್ಚಿದ್ದು, ಏಲಕ್ಕಿ ಬಾಳೆ ಕೆಜಿಗೆ ರೂ.70, ಪಚ್ಚಬಾಳೆ ಕೆಜಿಗೆ ರೂ.60 ಬೆಲೆ ಇತ್ತು. ಗಣೇಶ ಹಬ್ಬದ ಹಿನ್ನಲೆ ಹೂವುಗಳ ಬೆಲೆಯೂ ತುಸು ಗಗನಕ್ಕೆ ಏರಿದ್ದವು.
ಶುಕ್ರವಾರ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರಿಚಿಕೆಯಾಗಿತ್ತು. ಸಾರ್ವಜನಿಕರು ತಮ್ಮ ಹಾಗೂ ಕುಟುಂಬದ ಆರೋಗ್ಯದ ಹಿನ್ನಲೆ ಸಾಮಾಜಿಕ ಅಂತರ ಕಾಯುವಿಕೆ, ಮಾಸ್ಕ್ ಧಾರಣೆ, ಸ್ಯಾನಿಟೈಜರ್ ಬಳಸುವ ಮೂಲಕ ಗೌರಿ ಗಣೇಶ ಹಬ್ಬ ಜೀವನಕ್ಕೆ ಕುತ್ತು ತರದಂತೆ ನೋಡಿಕೊಳ್ಳಬೇಕಿದೆ.