Wednesday, July 6, 2022

Latest Posts

ಧಾರವಾಡ| ರಾಷ್ಟ್ರೀಯ ಮತದಾರರ ದಿನಾಚರಣೆ: ಜಿಲ್ಲಾಡಳಿತದಿಂದ ಜನಜಾಗೃತಿ ಜಾಥಾ

ಹೊಸದಿಗಂತ ವರದಿ, ಧಾರವಾಡ:

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ಯ ಶುಕ್ರವಾರ ಜನಜಾಗೃತಿ ಜಾಥಾ ನಡೆಯಿತು.

ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಿದಂಬರ ಅವರು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಜ್ಯ ಮಟ್ಟದ ತರಬೇತಿದಾರ ಕೆ.ಎಂ.ಶೇಖ, ಜಿಲ್ಲಾ ಮತದಾರ ಸಾಕ್ಷರತಾ ಸಮಿತಿಗಳ ನೋಡೆಲ್ ಅಧಿಕಾರಿ ರಮೇಶ ಹಡಪದ, ಶಿಕ್ಷಕ ಎಪ್.ಬಿ.ಕಣವಿ ನೇತೃತ್ವದ ಸ್ನೇಹರಂಗ ಕಲಾತಂಡದ ಸದಸ್ಯರ ಮತದಾರ ಜಾಗೃತಿ ಗೀತೆ ಹಾಡಿದರು.

ಅರ್‌ಎಲ್‌ಎಸ್, ಅಂಜುಮಾನ, ಮದಿನಾ ಸೇರಿದಂತೆ ಅನುದಾನಿತ, ಅನುದಾನ ರಹಿತ ಮತ್ತು ವಿವಿಧ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

ಆರ್.ಎನ್.ಶೆಟ್ಟಿ ಕ್ರೀಡಾಂಗಣದಿoದ ಆರಂಭವಾದ ಜಾಥಾ ಆಲೂರು ವೆಂಕಟರಾವ್ ವೃತ್ತ, ಹಳೆ ಬಸ್ ನಿಲ್ದಾಣ, ವಿವೇಕಾನಂದ ವೃತ್ತದ ಮೂಲಕ ಜಿಲ್ಲಾ ನ್ಯಾಯಾಲಯದ ಮೂಲಕ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss