Tuesday, August 16, 2022

Latest Posts

ಧಾರವಾಡ| ರೈತ ಚಳುವಳಿಗೆ ಬೆಂಬಲ: ಬೃಹತ್‌ ಟ್ರ್ಯಾಕ್ಟರ್ Rally

ದಿಗಂತ ವರದಿ,ಧಾರವಾಡ:

ದೆಹಲಿಯಲ್ಲಿ ರೈತರು ನಡೆಸುವ ಚಳವಳಿ ಬೆಂಬಲಿಸಿ ಧಾರವಾಡದಲ್ಲಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಶನಿವಾರ ನಡೆಯಿತು.

ನಗರದ ಕಲಾಭವನದಿಂದ ಆರಂಭಗೊಂಡ ರ್ಯಾಲಿಯು, ಪಾಲಿಕೆ ವೃತ್ತ, ಅಂಜುಮನ್ ಕಾಲೇಜು, ವಿವೇಕಾನಂದ ಸರ್ಕಲ್, ಸುಭಾಷ ರಸ್ತೆ, ಕೆಸಿಸಿ ಬ್ಯಾಂಕ್ ಮೂಲಕ ಹಾಯ್ದು ಸಂಚಾರಿ ಠಾಣೆ, ನಗರ ಬಸ್ ನಿಲ್ದಾಣ, ಜುಬ್ಲಿ ಸರ್ಕಲ್, ಕೋರ್ಟ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಸಮಾವೇಶವಾಗಿ ಮಾರ್ಪಟ್ಟಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತ ಮುಖಂಡರು, ಕಳೆದ ಎರಡು ತಿಂಗಳಲ್ಲಿ 60 ರೈತರ ಮೃತಪಟ್ಟರೂ, ಕೇಂದ್ರ ಸರ್ಕಾರ ರೈತ ಚಳವಳಿಗೆ ಸ್ಪಂದಿಸಿಲ್ಲ. ರೈತ ವಿರೋಧಿ ಮಸೂದೆ ಹಿಂಪಡೆಗೆ ಆಗ್ರಹ ಮಾಡಿದರು.

ರ‌್ಯಾಲಿಯಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ, ಬಸವರಾಜ ಮಲಕಾರಿ, ಭೀಮಪ್ಪ ಕಾಸಾಯಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು, 42ಕ್ಕೂ ಅಧಿಕ ಟ್ರ್ಯಾಕ್ಟರ್ ಭಾಗವಹಿಸಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss