ಧಾರವಾಡ: ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದ್ದು, ಅದಕ್ಕೆ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಆರೋಪಿಸಿ ಬಾಣಂತಿಯ ಸಂಬಂಧಿಕರು, ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರೊಂದಿಗೆ ಆಸ್ಪತ್ರೆ ಎದುರಿಗೆ ಗುರುವಾರ ದಿಢೀರ್ ಪ್ರತಿಭಟಿಸಿದರು.
ಧಾರವಾಡ ತಾಲೂಕಿನ ಮುಗದ ಗ್ರಾಮದ ಗರ್ಭಿಣಿಯನ್ನು ಹೆರಿಗೆಗೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ನಿನ್ನೆ ಹೆರಿಗೆಯಾಗಿದ್ದು, ಶಿಶು ಸಾವನ್ನಪ್ಪಿದೆ.
ಹೆರಿಗೆ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಶಿಶು ಸಾವನ್ನಪ್ಪಿದೆಂದು ಆರೋಪಿಸಿ ಬಾಣಂತಿಯ ಸಂಬಂಧಿಕರು ಸಿವಿಲ್ ಆಸ್ಪತ್ರೆ ಎದುರಿಗೆ ಪ್ರತಿಭಟಿಸಿದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಕುಮಾರ ಮಾನಕರ, ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ವಹಿಸಿಲ್ಲ. ಗರ್ಭಿಣಿ ಮಹಿಳೆಗೆ ಒಂಬತ್ತು ತಿಂಗಳು ತುಂಬಿರಲಿಲ್ಲ ಎಂದು ಸ್ಪಷ್ಟಪಡಿಸಿದರು.