ಧಾರವಾಡ: ಸಾಂತ್ವನ ಸಹಾಯವಾಣಿಗೆ ಸಚಿವ ಶೆಟ್ಟರ್ ಚಾಲನೆ

0
65

ಧಾರವಾಡ: ಲಾಕ್‌ಡೌನ್ ಘೋಷಣೆಯಲ್ಲಿ ಯಾವುದಾರೂ ಕುಟುಂಬದಲ್ಲಿ ಕೌಟುಂಬಿಕ ದೌರ್ಜನ್ಯ ನಡೆದರೆ ಉಚಿತ ಸಹಾಯವಾಣಿ, ದೂರವಾಣಿ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾರಂಭವಾಗಿರುವ ಈ ದೂರವಾಣಿ ಆಪ್ತಸಲಹಾ ಕೇಂದ್ರಕ್ಕೆ ಬೃಹತ್-ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬುಧವಾರ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೌಟುಂಬಿಕ ದೌರ್ಜನ್ಯ ತಡೆಗೆ ಪ್ರಾರಂಭಿಸಿರುವ ಸಾಂತ್ವನ ಸಹಾಯವಾಣಿಯ ಭಿತ್ತಿಪತ್ರ ಬಿಡುಗಡೆಗೊಳಿಸಿದ ಸಚಿವರು, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿರ್ವಹಣೆಗೊಳ್ಳುತ್ತಿರುವ ಮಹಿಳಾ ಸಹಾಯವಾಣಿ ಸಂಖ್ಯೆ ೧೮೧, ದೂರವಾಣಿ ಸಂಖ್ಯೆ ೦೮೩೬-೨೪೪೫೪೮೪, ೦೮೩೬-೨೭೪೭೩೫೩ಕ್ಕೆ ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಲು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಸಿ.ಎಂ.ನಿ0ಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ,ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಶೆಟ್ಟರ್ ಇದ್ದರು.

LEAVE A REPLY

Please enter your comment!
Please enter your name here