Wednesday, June 29, 2022

Latest Posts

ಧಾರವಾಡ| ಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ವ್ಯಕ್ತಿ: ಕುಟುಂಬಕ್ಕೆ ಸಿಗದ ಪರಿಹಾರ..!

ಧಾರವಾಡ: ಒಂದೂವರೆ ತಿಂಗಳ ಹಿಂದೆ ಧಾರವಾಡ ತಾಲೂಕಿನ ಹಾರೋಬೆಳವಡಿ ಹಾಗೂ ಆಯಟ್ಟಿ ಗ್ರಾಮಗಳ ಮಧ್ಯದ ಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಮಡಿವಾಳಪ್ಪ ಜಕ್ಕಣ್ಣವರ ಕುಟುಂಬಕ್ಕೆ ಈವರೆಗೂ ಪರಿಹಾರ ಸಿಗದಿರುವುದರಿಂದ ವಯಸ್ಸಾದ ಮಡಿವಾಳಪ್ಪನ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುಂತಾಗಿದೆ.
ಮಡಿವಾಳಪ್ಪ ಹೊಲಕ್ಕೆ ಹೋದಾಗ ಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ. ಎನ್‌ಡಿಆರ್‌ಎಫ್ ತಂಡ 10 ದಿನಗಳು ಶೋಧ ಕಾರ್ಯ ನಡೆಸಿದರೂ, ಮಡಿವಾಳಪ್ಪ ಸಿಗದಿರುವುದರಿಂದ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಮಡಿವಾಳಪ್ಪ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.
ಈ ದೂರು ದಾಖಲಿಸಿದ್ದರಿಂದ ಮಡಿವಾಳಪ್ಪನ ಪೋಷಕರಿಗೆ ಈವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ದುಡಿಯುವ ಮಗನನ್ನೂ ಕಳೆದುಕೊಂಡ ಪೋಷಕರು ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ದೂರು ದಾಖಲಾತಿಯಿಂದ ಈ ಕುಟುಂಬಕ್ಕೆ ಸಿಗಬೇಕಾದ ಪರಿಹಾರಕ್ಕೂ ಕತ್ತರಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿವೆ.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಕಲಘಟಗಿ ಬಾಲಕಿ ನೀರಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದು, ಆ ಕುಟಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಿದ ಜಿಲ್ಲಾಡಳಿತ, ಮಡಿವಾಳಪ್ಪನ ಕುಟುಂಬಕ್ಕೆ ನೀಡಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಸೌಜನ್ಯಕ್ಕೂ ಆ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂದು ಕಿಡಿಕಾರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಮಡಿವಾಳಪ್ಪ ಕಾಣೆಯಾಗಿದ್ದಾನೆ ಎಂಬ ದೂರನ್ನು ಹಿಂಪಡೆದು, ಆ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಘಟನೆಯನ್ನು ಜಿಲ್ಲಾಡಳಿತ ಯಾವ ರೀತಿ ಪರಿಗಣಿಸುತ್ತದೆ ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss