ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ನಿತ್ಯವೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಭಾನುವಾರವೂ ಸಹ 10 ಕೋವಿಡ್-೧೯ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 221ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ-6840(20-ಪುರುಷ) ಹುಬ್ಬಳ್ಳಿ ಅರವಿಂದ ನಗರ ನಿವಾಸಿ. ಪಿ-6841(39-ಮಹಿಳೆ) ಧಾರವಾಡ ತಪೋವನ ನಾಗಠಾಣ ಕಲ್ಯಾಣ ಮಂಟಪ ಹತ್ತಿರದ ನಿವಾಸಿ. ಪಿ-6842 (35-ಮಹಿಳೆ) ಧಾರವಾಡ ಮರಾಠ ಕಾಲನಿ ೮ನೇ ಕ್ರಾಸ್ ನಿವಾಸಿ. ಪಿ-6833 (54-ಪುರುಷ) ಧಾರವಾಡ ಶಿವಾಜಿ ರಸ್ತೆಯ ಕೆರೆ ಕೆಳಗಿನ ಓಣಿ ನಿವಾಸಿ. ಪಿ-6834(30-ಮಹಿಳೆ) ಧಾರವಾಡ ಕಿಲ್ಲಾ ರಸ್ತೆಯ ಕಟ್ಟಿಚಾಳ ನಿವಾಸಿ. ಪಿ-6835(46-ಮಹಿಳೆ) ಸಾಧನಕೇರಿ ನಿವಾಸಿ. ಪಿ-6836(46-ಮಹಿಳೆ)ಧಾರವಾಡ ಮಂಗಳವಾರಪೇಟೆಯ ನಗರೇಶ್ವರ ದೇವಸ್ಥಾನ ಹತ್ತಿರದ ನಿವಾಸಿ. ಪಿ-6837(೩೬-ಮಹಿಳೆ) ಮಾಳಮಡ್ಡಿ ಕೆ.ಇ.ಬೋರ್ಡ್ ಶಾಲೆ ಹತ್ತಿರದ ನಿವಾಸಿ. ಈ ಏಳು ಜನರು
ಪಿ-5970 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-6838 (8-ಬಾಲಕ) ನವಲಗುಂದ ತಾಲೂಕಿನ ಮೊರಬ ಗ್ರಾಮದ ಜಾಡರ ಓಣಿ ನಿವಾಸಿ. ಪಿ-6222 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-6839 (20-ಪುರುಷ) ನವಲಗುಂದ ತಾಲೂಕು ಕೊಂಡಿಕೊಪ್ಪ ಗ್ರಾಮದವರು. ಉಸಿರಾಟದ ತೊಂದರೆಯಿ0ದ ಬಳಲುತ್ತಿದ್ದರು.
ಈಗಾಗಲೇ ಜಿಲ್ಲೆಯಲ್ಲಿ ಕರೋನಾದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ಸೋಂಕಿತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಕಳೆದ ಮೂರು ದಿನಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.
ಇಬ್ಬರು ಗುಣ-ಬಿಡುಗಡೆ
ಕೋರಾನಾ ಸೋಂಕಿಗೆ ತುತ್ತಾದ ಇಬ್ಬರ ವ್ಯಕ್ತಿಗಳು ಗುಣವಾಗಿದ್ದು, ಹುಬ್ಬಳ್ಳಿ ಕಿಮ್ಸ್ನಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಈವರೆಗೆ ಗುಣವಾದವರ ಸಂಖ್ಯೆ 50ಕ್ಕೆ ಏರಿದ್ದು, ಉಳಿದ 69 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.