Thursday, August 18, 2022

Latest Posts

ಧಾರವಾಡ| 100 ಅಡಿ ಎತ್ತರದ ಧ್ವಜಸ್ತಂಭ-ಧ್ವಜಾರೋಹಣಕ್ಕೆ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

ಧಾರವಾಡ: ಕರ್ನಾಟಕದಲ್ಲಿ ಆಂಗ್ಲಭಾಷೆ ಮಾನ್ಯ ಮಾಡುತ್ತಾರೆ. ಹಿಂದಿ ಭಾಷೆಗೆ ವಿರೋಧಿಸುತ್ತಾರೆ. ಇದು ನಮ್ಮ ರಾಜ್ಯ-ದೇಶದ ದೌಭಾಗ್ಯ. ಕೆಲವು ಜನರಿಗೆ ಇಂಗ್ಲೀಷ್ ನಡೆಯುತ್ತದೆ. ಆದರೆ, ಹಿಂದಿ ಬೋರ್ಡ್ ಗೆ ಡಾಂಬರು ಬಳಿಯುವ ಕೆಲಸ ಮಾಡುತ್ತಾರೆ ಎಂದು ಪ್ರಹ್ಲಾದ್ ಜೋಶಿ ಹಿಂದಿ ಭಾಷೆಯ ಪರ ಒಲವು ವ್ಯಕ್ತಪಡಿಸಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ನಿರ್ಮಿಸಿರುವ 100 ಅಡಿ ಎತ್ತರದ ಧ್ವಜಸ್ತಂಭ-ಧ್ವಜಾರೋಹಣಕ್ಕೆ ಶನಿವಾರ ಚಾಲನೆ ನೀಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರೀಯತೆಗೆ ಹಿಂದಿ ಭಾಷೆಯೇ ಪ್ರಮುಖ ಕಾರಣ. ಕೇಂದ್ರ ಸಚಿವನಾಗಿ ಹಿಂದಿಯಲ್ಲಿ ನಾನು ಮಾತನಾಡುವುದು ಅನಿವಾರ್ಯ ಎಂದರು.
ನನಗೆ ಕನ್ನಡದಂತೆ ಹಿಂದಿಯಲ್ಲಿ ಭಾಷಣ ಮಾಡಲು ಬರಲ್ಲವೆಂಬ ನೋವಿದೆ. ಶಾಲೆಯಲ್ಲಿ ನಾನು ಹಿಂದಿ ಕಲಿತಿದ್ದರೇ ಸಂಸತ್‌ನಲ್ಲಿ ಒಳ್ಳೆಯ ರೀತಿಯಲ್ಲಿ ಮಾತನಾಡಬಹುದಿತ್ತು. ಕನ್ನಡ ಎಲ್ಲರೂ ಕಲಿಯಲೇಬೇಕು. ಕನ್ನಡದ ಮುಂದೆ ಇಂಗ್ಲೀಷ್ ಶಿಶು ಇದ್ದಂತೆಯೇ
ಭಾರತದ ಎಲ್ಲ ಭಾಷೆಗಳಿಗೆ ಇಂಗ್ಲೀಷ್‌ಗಿoತ ದೊಡ್ಡ ಇತಿಹಾಸ ಇದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮುಖಂಡ ಈರೇಶ ಅಂಚಟಗೇರಿ, ಹಿಂದಿ ಪ್ರಚಾರ ಸಭಾದ ಆಡಳಿತ ಮಂಡಳಿ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!