Thursday, August 18, 2022

Latest Posts

ಧಾರವಾಡ| 5 ಕೋವಿಡ್ ಪ್ರಕರಣ ಪತ್ತೆ: ಒಟ್ಟು 183ಕ್ಕೇರಿದ ಸೋಂಕಿತರ ಸಂಖ್ಯೆ

ಧಾರವಾಡ: ಶೈಕ್ಷಣಿಕ ನಗರಿ ಧಾರವಾಡ ಜಿಲ್ಲೆಯಲ್ಲಿ ನಿತ್ಯವೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರವೂ ಐದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ- 8286 (52-ಪುರುಷ), ಇವರು ಧಾರವಾಡ ಸಂಗಮ್ ಟಾಕೀಸ್ ಹತ್ತಿರ ಕೆಂಪಗೇರಿ ಓಣಿಯ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದು, ತಪಾಸಣೆಗೆ ಒಳಪಡಿಸಿದಾಗ ಕೋವಿಡ್ ದೃಡಪಟ್ಡಿದೆ ಎಂದು ತಿಳಿಸಿದ್ದಾರೆ.
ಪಿ- 8287 (65-ಮಹಿಳೆ), ಇವರು ಹುಬ್ಬಳ್ಳಿ ತಾಲೂಕು ರಾಯನಾಳದ ಬಸಮ್ಮ ಕಾಲನಿ ನಿವಾಸಿ. ಸಂಪರ್ಕ ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪಿ- 8288 (43-ಪುರುಷ) ಹುಬ್ಬಳ್ಳಿ ರಾಮಲಿಂಗೇಶ್ವರ ನಗರದ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದು, ತಪಾಸಣೆ ವೇಳೆ ಕೋವಿಡ್ ಪತ್ತೆಯಾಗಿದೆ ಎಂದಿದ್ದಾರೆ.ಪಿ-8289 (48-ಪುರುಷ),ಪಿ-8290 (40-ಮಹಿಳೆ) ಇವರಿಬ್ಬರೂ ನವಲಗುಂದ ತಾಲ್ಲೂಕು ಮೊರಬ ಗ್ರಾಮದ ನಿವಾಸಿಗಳು.ಪಿ-7039 ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಹೇಳಿದ್ದಾರೆ.
6 ಜನ ಬಿಡುಗಡೆ
ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿರುವ ಪಿ-6253 ( 37-ಪುರುಷ) , ಪಿ-6263(46-ಪುರುಷ) , ಪಿ-6264(33-ಮಹಿಳೆ), ಪಿ-6265(12-ಬಾಲಕಿ) ,ಪಿ-6264 (33-ಮಹಿಳೆ) ಹಾಗೂ ಪಿ-6269(28-ಪುರುಷ) ಈ ಆರು ಜನರನ್ನು ನಿನ್ನೆ ಜೂನ್ 19 ರ ಸಂಜೆ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ಸಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 183 ಕ್ಕೇರಿದೆ.62 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!