ಇಸ್ಲಾಮಾಬಾದ್: ಮಹೇಂದ್ರಸಿಂಗ್ ಧೋನಿ, ವಿಶ್ವಕಪ್ ಮುಗಿದ ಕೂಡಲೇ ಕ್ರಿಕೆಟ್ಗೆ ವಿದಾಯ ಹೇಳಬೇಕಿತ್ತು ಎಂದು ಪಾಕ್ ಮಾಜಿ ಆಟಗಾರ ಶೋಯಬ್ ಅಕ್ತರ್ ಹೇಳಿದ್ದಾರೆ.
ವಾರ್ತಾಸಂಸ್ಥೆಯೊಂದಿಗೆ ಮಾತನಾಡಿದ ಅಕ್ತರ್, ಕ್ರಿಕೆಟ್ನ ಎಲ್ಲ ಬಗೆಯ ಆಟಗಳಿಗೆ ವಿದಾಯ ಹೇಳಲು ಯಾಕೆ ತಡ ಮಾಡುತ್ತಿದ್ದಾರೆಂಬುದೇ ಅರ್ಥವಾಗದ ಸಂಗತಿ. ನಾನೇನಾದರೂ ಧೋನಿ ಜಾಗದಲ್ಲಿ ಇದ್ದಿದ್ದರೆ ಒಂದು ಕ್ಷಣವೂ ಆಲೋಚಿಸದೆ ಕ್ರಿಕೆಟ್ಗೆ ವಿದಾಯ ಹೇಳುತ್ತಿದೆ ಎಂದೂ ಅವರು ವ್ಯಾಖ್ಯಾನಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಧೋನಿ ಕೊಡಗೆ ಅಪಾರ. ಆತನ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಅಕ್ತರ್ ಹೇಳಿದ್ದಾರೆ.
ಕಪಿಲ್ದೇವ್ಗೆ ಅರ್ಥವಾಗುತ್ತಿಲ್ಲ
ಭಾರತ-ಪಾಕ್ ಕ್ರಿಕೆಟ್ ಪಂದ್ಯವಾಡುವ ಬಗ್ಗೆ ತಾನು ಪ್ರಸ್ತಾಪಿಸಿರುವ ಸಂಗತಿಯನ್ನು ಕಪಿಲ್ದೇವ್ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಇಂದು ಭಾರತ ಮತ್ತು ಪಾಕ್ನಲ್ಲಿ ಬರೀ ಕ್ರಿಕೆಟ್ ಅನ್ನೇ ನೆಚ್ಚಿರುವ ಸಾವಿರಾರು ಮಂದಿ ಆಟಗಾರರು ಕೋರೋನಾ ಲಾಕ್ಡೌನ್ನಿಂದ ಬೀದಿಪಾಲಾಗುವಂತಾಗಿದೆ, ಅಂತಹ ಕುಟುಂಬಗಳಿಗೆ ಆಸರೆಯಾಗಿ ನಿಲ್ಲುವ ಉದ್ದೇಶದಿಂದ ತಾವು ಈ ಪ್ರಸ್ತಾವನೆ ಮಾಡಿರುವುದಾಗಿ ಅಕ್ತರ್ ಹೇಳಿದ್ದಾರೆ.